ಮೈಸೂರು: ವರುಣಾರ್ಭಟದ ನಡುವೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಹೆಚ್1 ಎನ್ 1 ಜ್ವರಕ್ಕೆ ಗರ್ಬಿಣಿಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ಹುಣಸೂರು ಬಳಿ ನಡೆದಿದೆ.
ಹುಣಸೂರಿನ ಕೋಣನಹೊಸಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಛಾಯಾ ಮೃತ ತುಂಬು ಗರ್ಭಿಣಿ. ಜ್ವರದಿಂದ ಬಳಲುತ್ತಿದ್ದ ಛಾಯಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಛಾಯಾ ಅವರಿಗೆ ಹೆಚ್1 ಎನ್ 1 ದೃಢಪಟ್ಟಿತ್ತು.
ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಛಾಯಾ ಮೃತಪಟ್ಟಿದ್ದಾರೆ. ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬ ಆಘಾತಕ್ಕೀಡಾಗಿದ್ದು ಆಕ್ರಂದನ ಮುಗಿಲು ಮುಟ್ಟಿದೆ.