alex Certify BIG NEWS: ಹೃದಯ ಬಡಿತದಲ್ಲಿ ಏಕಾಏಕಿ ಹೆಚ್ಚಳ; ಆಸ್ಪತ್ರೆಗೆ ದಾಖಲಾದ ನಟಿ ದೀಪಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೃದಯ ಬಡಿತದಲ್ಲಿ ಏಕಾಏಕಿ ಹೆಚ್ಚಳ; ಆಸ್ಪತ್ರೆಗೆ ದಾಖಲಾದ ನಟಿ ದೀಪಿಕಾ

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಹೃದಯಬಡಿತ ಏಕಾಏಕಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ನಾಗ್ ಅಶ್ವಿನ್ ನಿರ್ದೇಶನದ ‘ಪ್ರಾಜೆಕ್ಟ್ ಕೆ’ ಸಿನಿಮಾ ಚಿತ್ರೀಕರಣಕ್ಕಾಗಿ ದೀಪಿಕಾ ಪಡುಕೋಣೆ ಹೈದರಾಬಾದಿಗೆ ಬಂದಿದ್ದು, ಆದರೆ ಅವರ ಹೃದಯ ಬಡಿತದಲ್ಲಿ ಏಕಾಏಕಿ ಹೆಚ್ಚಳವಾದ ಕಾರಣ ಆತಂಕಕ್ಕೆ ಕಾರಣವಾಗಿತ್ತು.

ಚಿಕಿತ್ಸೆ ಬಳಿಕ ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲವೆಂದು ತಿಳಿದು ಬಂದಿದ್ದು, ಈಗ ಆಸ್ಪತ್ರೆಯಿಂದ ಬಿಡುಗಡೆಗೊಂಡು ಚಿತ್ರೀಕರಣಕ್ಕೆ ಮತ್ತೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...