alex Certify BIG NEWS: ಹುಬ್ಬಳ್ಳಿ ಗಲಭೆ ಪ್ರಕರಣ; ರಿಂಗ್‌ ಮಾಸ್ಟರ್‌ ಮಹಾನಾಯಕ ಆಗಿರಬಹುದೇ ಅಥವಾ ಮೀರ್‌ಸಾದಿಕ್ ಆಗಿರಬಹುದೇ…..?; BJP ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಬ್ಬಳ್ಳಿ ಗಲಭೆ ಪ್ರಕರಣ; ರಿಂಗ್‌ ಮಾಸ್ಟರ್‌ ಮಹಾನಾಯಕ ಆಗಿರಬಹುದೇ ಅಥವಾ ಮೀರ್‌ಸಾದಿಕ್ ಆಗಿರಬಹುದೇ…..?; BJP ಪ್ರಶ್ನೆ

ಬೆಂಗಳೂರು: ಹುಬ್ಬಳ್ಳಿ ಗಲಭೆಯನ್ನು ರಾಜ್ಯ ಸರ್ಕಾರ ಕೇವಲ ಮೂರು ಗಂಟೆಯಲ್ಲಿ ತಹಬದಿಗೆ ತಂದಿದೆ, ಮತಾಂಧ ಅಲ್ಪಮತೀಯ‌ ಆರೋಪಿಗಳ ಬಂಧನವಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಹುಯಿಲೆಬ್ಬಿಸುತ್ತಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಸಂಪತ್ ರಾಜ್ ಸೇರಿದಂತೆ 110 ಕ್ಕೂ ಹೆಚ್ಚು ಮತಾಂಧರ ಬಂಧನ. ಪಾದರಾಯನಪುರ ಗಲಭೆಯಲ್ಲಿ 116 ದಂಗೆಕೋರರ ಬಂಧನ. ಉಪ್ಪಿನಂಗಡಿಯ ಠಾಣೆಯ ಮುಂದೆ ಗಲಭೆ ಮಾಡಿದವರ ಬಂಧನ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಸೇರಿದಂತೆ 126 ಸಮಾಜ ಘಾತುಕರ ಬಂಧನವಾಗಿದೆ. ಕಾಂಗ್ರೆಸ್ ಜಿಹಾದಿಗಳಿಗೆ ಬೆಂಬಲ ನೀಡುತ್ತದೆ ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಕಾಂಗ್ರೆಸ್ ರಣಹದ್ದುಗಳಿಗೆ ಹುಬ್ಬಳ್ಳಿ ಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಸಂತೋಷ ನೀಡಿಲ್ಲ. ಸಮಾಜದ ಶಾಂತಿ ಸರ್ವನಾಶವಾಗುವಂಥ ಫಲಿತಾಂಶವನ್ನು ಕಾಂಗ್ರೆಸ್ಸಿಗರು ಬಯಸಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ಮಿಂಚಿನ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ನಿಭಾಯಿಸಿದ್ದು ಹರಳೆಣ್ಣೆ ಕುಡಿಸಿದ ಅನುಭವ ನೀಡಿದೆ.

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಬಂಧನವಾಗಿದೆ. ಆದರೆ ರಿಂಗ್ ಮಾಸ್ಟರ್ ಯಾರೆಂದು ತಿಳಿಯಬೇಕಲ್ಲವೇ? ಆ ರಿಂಗ್‌ ಮಾಸ್ಟರ್‌ ಮಹಾನಾಯಕ ಆಗಿರಬಹುದೇ ಅಥವಾ ಮೀರ್‌ಸಾದಿಕ್ ಆಗಿರಬಹುದೇ? ಎಂದು ಪ್ರಶ್ನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...