ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೇ ಕೆಲವು ಕ್ಷೇತ್ರಗಳಲ್ಲಿ ಮೊದಲ ಹಂತದ ಮತ ಎಣಿಕೆಯು ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ.
ಆರಂಭಿಕ ಟ್ರೆಂಡ್ಗಳಲ್ಲಿ ಬಿಜೆಪಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಬಹುಮತದ ಗಡಿಯನ್ನು ದಾಟಿದೆ. ಇತ್ತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ 4500ಕ್ಕೂ ಅಧಿಕ ಮತಗಳಿಂದ ಗೋರಖ್ಪುರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೂವರು ಹಾಲಿ ಸಿಎಂಗಳು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಕಾಯ್ದುಕೊಂಡಿದ್ದಾರೆ.
ಗೋವಾದಲ್ಲಿ ಬಿಜೆಪಿ ಹಾಲಿ ಸಿಎಂ ಪ್ರಮೋದ್ ಸಾವಂತ್ ಸಾಂಕ್ವೆಲಿಮ್ ಕ್ಷೇತ್ರದಲ್ಲಿ 400 ಮತಗಳಿಂದ ಹಿಂದುಳಿದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮೇಶ್ ಸಗ್ಲಾನಿ ಮುನ್ನಡೆ ಸಾಧಿಸಿದ್ದಾರೆ.
ಉತ್ತರಾಖಂಡ್ನಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಇರಾದೆಯನ್ನು ಹೊಂದಿದ್ದರೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಖತಿಮಾ ಕ್ಷೇತ್ರದಿಂದ ಹಿಂದುಳಿದಿದ್ದಾರೆ.
ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಭದೌರ್ ಹಾಗೂ ಚಮ್ಕೌರ್ ಸಾಹಿಬ್ಗಳೆರಡರಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ.