ಉಡುಪಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಉಡುಪಿ ಶಾಸಕ ರಘುಪತಿ ಭಟ್ ಗೆ ವಿದೇಶಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಜೀವ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್, ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮಾಹಿತಿ ನೀಡಿದ್ದು, ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಿಂದ ನಿರಂತರ ಫೋನ್ ಕರೆ ಹಾಗೂ ಇಂಟರ್ ನೆಟ್ ಮೂಲಕ ಕರೆ ಮಾಡಿ ದುಷ್ಕರ್ಮಿಗಳು ಬೆದರಿಕೆಯೊಡ್ದುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಂಜಾಬ್ ಚುನಾವಣಾ ಪ್ರಚಾರ ಕಣಕ್ಕಿಳಿದ ಅರವಿಂದ್ ಕೇಜ್ರಿವಾಲ್ ಪತ್ನಿ ಹಾಗೂ ಪುತ್ರಿ
ಈ ಕುರಿತು ಮಾತನಾಡಿರುವ ಶಾಸಕರು, ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹಾಗಂತ ನಾನು ಹೆದರಿ ಕೂರುವ ವ್ಯಕ್ತಿಯಲ್ಲ. ನನ್ನ ಜತೆಗೂ ಸಾಕಷ್ಟು ಜನರಿದ್ದಾರೆ. ಮುಸ್ಲೀಮರಿಗೆ ಸಮಸ್ಯೆಗಳಿಲ್ಲ, ಕೇವಲ ಆರು ಮಕ್ಕಳ ತಲೆ ಕೆಡಿಸಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯ ಮುಸ್ಲೀಂ ಒಕ್ಕೂಟ ಖಾಜಿಗಳು, ಬೆಂಗಳೂರು ಭಾಗದ ಮುಸ್ಲೀಂರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಬಳಿ ಯಾವ ಗನ್ ಮ್ಯಾನ್ ಇಲ್ಲ, ಮನೆಗೆ ಸೆಕ್ಯೂರಿಟಿ ಕೂಡ ಇಲ್ಲ. ಉಡುಪಿ ಕ್ಷೇತ್ರದ ಜನತೆಯೇ ನನಗೆ ಸೆಕ್ಯುರಿಟಿ. ಆದರೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಗನ್ ಮ್ಯಾನ್ ಕಳುಹಿಸಿದ್ದಾರೆ ಎಂದು ಹೇಳಿದರು.