alex Certify BIG NEWS: ಹನಿಟ್ರ್ಯಾಪ್ ಗೆ ಬಲಿಯಾದ್ರಾ ಬಂಡೆ ಮಠದ ಸ್ವಾಮೀಜಿ ? ಬೆಚ್ಚಿಬೀಳಿಸುವಂತಿವೆ ಬಹಿರಂಗವಾಗುತ್ತಿರುವ ಒಂದೊಂದೇ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹನಿಟ್ರ್ಯಾಪ್ ಗೆ ಬಲಿಯಾದ್ರಾ ಬಂಡೆ ಮಠದ ಸ್ವಾಮೀಜಿ ? ಬೆಚ್ಚಿಬೀಳಿಸುವಂತಿವೆ ಬಹಿರಂಗವಾಗುತ್ತಿರುವ ಒಂದೊಂದೇ ವಿವರ

ರಾಮನಗರ: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಹನಿಟ್ರ್ಯಾಪ್ ಖೆಡ್ಡಾಗೆ ಸಿಲುಕಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸಮಾಜದ ಮುಖಂಡರೇ ಶ್ರೀಗಳ ವಿರುದ್ಧ ಮಸಲತ್ತು ನಡೆಸಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಮಠದ ಗದ್ದುಗೆಯನ್ನು ಬೇರೊಬ್ಬ ಸ್ವಾಮೀಜಿಗೆ ವಹಿಸಲು ಈ ರೀತಿ ಷಡ್ಯಂತ್ರ ಹೆಣೆದು ಸ್ವಾಮೀಜಿಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆದಿತ್ತು. ಇದೇ ಕಾರಣಕ್ಕೆ ಬೆಂಗಳೂರು ಮೂಲದ ಮಹಿಳೆಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳೆಯೊಬ್ಬಳು ಕಷ್ಟ ಹೇಳಿಕೊಂಡು ಸ್ವಾಮೀಜಿ ಸ್ನೇಹ ಬೆಳೆಸಿದ್ದರು. ಸ್ನೇಹದ ಬಳಿಕ ಸ್ವಾಮೀಜಿಯೊಂದಿಗೆ ಮಹಿಳೆ ಅನ್ಯೋನ್ಯಳಾಗಿದ್ದಳು. ಮಹಿಳೆಯ ಮಾತಿಗೆ ಸ್ವಾಮೀಜಿ ಮರುಳಾಗಿದ್ದರು. ಹಲವು ಬಾರಿ ಸ್ವಾಮೀಜಿ ಜೊತೆ ಮಹಿಳೆ ವಿಡಿಯೋ ಕಾಲ್ ಮಾಡಿದ್ದಳು. ಇದನ್ನೇ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಳು. ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು ಎನ್ನಲಾಗಿದೆ.

ಇದೇ ಕಾರಣಕ್ಕೆ ಮರ್ಯಾದೆಗೆ ಅಂಜಿ ಸ್ವಾಮೀಜಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...