alex Certify BIG NEWS: ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀಟೂ ಬಾಂಬ್ ಸ್ಫೋಟ; ಕನ್ನಡ ಚಿತ್ರರಂಗದ ವಿರುದ್ಧ ಮೀಟೂ ಆರೋಪ ಮಾಡಿದ ಮತ್ತೋರ್ವ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀಟೂ ಬಾಂಬ್ ಸ್ಫೋಟ; ಕನ್ನಡ ಚಿತ್ರರಂಗದ ವಿರುದ್ಧ ಮೀಟೂ ಆರೋಪ ಮಾಡಿದ ಮತ್ತೋರ್ವ ನಟಿ

ಬೆಂಗಳೂರು: ಖ್ಯಾತ ನಟಿ ಆಶಿತಾ ಕನ್ನಡ ಚಿತ್ರರಂಗದ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಆರೋಗ್ಯಕರ ವಾತಾವರಣ ಇಲ್ಲದ ಕಾರಣಕ್ಕೆ ತಾನು ಸಿನಿರಂಗದಿಂದಲೇ ದೂರಾಗಿದ್ದಾಗಿ ಆಶಿತಾ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಆಶಿತಾ, ಅವರು ಬಯಸಿದಂತೆ ಇರಲಿಲ್ಲ,  ಸೆಟ್ ನಲ್ಲಿ ಕಿರುಕುಳ ಕೊಡುತ್ತಿದ್ದರು. ನಾನು ಅವರು ಹೇಳಿದಂತೆ ಅಡ್ಜಸ್ಟ್ ಮೆಂಟ್ ಆಗಿಲ್ಲ. ಹೇಳಿದಂತೆ ಮಾಡಿದರೆ ಎಕ್ಸ್ಟ್ರಾ ಪೇಮೆಂಟ್ ಕೊಡುವುದಾಗಿ ಹೇಳುತ್ತಿದ್ದರು. ನಾನು ಅದಕ್ಕೆ ಒಪ್ಪಲಿಲ್ಲ. ಚಿತ್ರರಂಗದಲ್ಲಿ ಒಳ್ಳೆಯ, ಆರೋಗ್ಯಕರ ವಾತಾವರಣ ಇರಲಿಲ್ಲ. ಆ ಕಾರಣಕ್ಕಾಗಿ ತಾನು ಚಿತ್ರರಂಗದಿಂದ ದೂರ ಉಳಿದಿದ್ದಾಗಿ ಹೇಳಿದ್ದಾರೆ.

ನಟಿ ಆಶಿತಾ ರೋಡ್ ರೋಮಿಯೋ, ಹಾರ್ಟ್ ಬೀಟ್, ತವರಿನ ಸಿರಿ, ಬಾ ಬಾರೋ ರಸಿಕ, ಆಕಾಶ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ನಟಿ ಆಶಿತಾ ಆರೋಪ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಬಿರುಗಾಳಿ ಬೀಸಿದ್ದು, ಚರ್ಚೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...