alex Certify BIG NEWS: ಸ್ಥಳೀಯರು, SP ಹೇಳಿದ ಮಾತನ್ನು ನಾನು ಹೇಳಿದ್ದೆ; ಈಗಲಾದರೂ ಕಾಂಗ್ರೆಸ್ ನವರು ಒಪ್ಪಿಕೊಳ್ಳಲಿ; ಹೇಳಿಕೆ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ಥಳೀಯರು, SP ಹೇಳಿದ ಮಾತನ್ನು ನಾನು ಹೇಳಿದ್ದೆ; ಈಗಲಾದರೂ ಕಾಂಗ್ರೆಸ್ ನವರು ಒಪ್ಪಿಕೊಳ್ಳಲಿ; ಹೇಳಿಕೆ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ

ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿಂದೆ ಮುಸಲ್ಮಾನ ವ್ಯಕ್ತಿಗಳ ಕೈವಾಡವಿದೆ. ಮುಸಲ್ಮಾನ ಗೂಂಡಾಗಳೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮುಸಲ್ಮಾನ ಗೂಂಡಾಗಳೇ ಕೊಲೆ ಮಾಡಿದ್ದಾಗಿ ಹೇಳಿದ್ದೆ. ಸ್ಥಳೀಯರು, ಎಸ್ ಪಿ ಹೇಳಿದ ಮಾತನ್ನು ನಾನು ಹೇಳಿದ್ದೆ. ಈಗ ಅರೆಸ್ಟ್ ಆಗಿರುವವರು ಕೂಡ ಮುಸ್ಲೀಮರೇ ಆಗಿದ್ದಾರೆ ಎಂದು ಹೇಳಿದ್ದಾರೆ.

ಈಗಾದರೂ ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್ ಇದನ್ನು ಒಪ್ಪಿಕೊಳ್ಳಬೇಕು. ಹರ್ಷ ಕೊಲೆ ತನಿಖೆಗೂ ಮೊದಲೇ ನಾನು ಮುಸ್ಲೀಂ ಗೂಂಡಾಗಳೇ ಭಾಗಿ ಎಂದಿರುವುದನ್ನು ಪ್ರಚೋದನಾತ್ಮಕ ಹೇಳಿಕೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆದರೆ ಈಗ ಪ್ರಕರಣದಲ್ಲಿ ಬಂಧನವಾದವರು ಕೂಡ ಮುಸ್ಲೀಂರು. ವಿಷಯ ತಿಳಿದೇ ಮಾತನಾಡಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...