ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿಂದೆ ಮುಸಲ್ಮಾನ ವ್ಯಕ್ತಿಗಳ ಕೈವಾಡವಿದೆ. ಮುಸಲ್ಮಾನ ಗೂಂಡಾಗಳೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮುಸಲ್ಮಾನ ಗೂಂಡಾಗಳೇ ಕೊಲೆ ಮಾಡಿದ್ದಾಗಿ ಹೇಳಿದ್ದೆ. ಸ್ಥಳೀಯರು, ಎಸ್ ಪಿ ಹೇಳಿದ ಮಾತನ್ನು ನಾನು ಹೇಳಿದ್ದೆ. ಈಗ ಅರೆಸ್ಟ್ ಆಗಿರುವವರು ಕೂಡ ಮುಸ್ಲೀಮರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಈಗಾದರೂ ಕಾಂಗ್ರೆಸ್ ನಾಯಕರಾದ ಬಿ.ಕೆ.ಹರಿಪ್ರಸಾದ್ ಇದನ್ನು ಒಪ್ಪಿಕೊಳ್ಳಬೇಕು. ಹರ್ಷ ಕೊಲೆ ತನಿಖೆಗೂ ಮೊದಲೇ ನಾನು ಮುಸ್ಲೀಂ ಗೂಂಡಾಗಳೇ ಭಾಗಿ ಎಂದಿರುವುದನ್ನು ಪ್ರಚೋದನಾತ್ಮಕ ಹೇಳಿಕೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆದರೆ ಈಗ ಪ್ರಕರಣದಲ್ಲಿ ಬಂಧನವಾದವರು ಕೂಡ ಮುಸ್ಲೀಂರು. ವಿಷಯ ತಿಳಿದೇ ಮಾತನಾಡಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.