alex Certify BIG NEWS : ಸೌದಿ ಅರೇಬಿಯಾ ರಾಜಧಾನಿಯಲ್ಲಿ ಯುದ್ಧ ಸಾಮಗ್ರಿ ಸಂಗ್ರಹಣಾ ಕೇಂದ್ರದಲ್ಲಿ ಭಾರೀ ಸ್ಫೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಸೌದಿ ಅರೇಬಿಯಾ ರಾಜಧಾನಿಯಲ್ಲಿ ಯುದ್ಧ ಸಾಮಗ್ರಿ ಸಂಗ್ರಹಣಾ ಕೇಂದ್ರದಲ್ಲಿ ಭಾರೀ ಸ್ಫೋಟ

ಸೌದಿ ಅರೇಬಿಯಾದ ರಾಜಧಾನಿ ರಿಯಾದ್​​ನ ಆಗ್ನೇಯ ಭಾಗದಲ್ಲಿರುವ ಬಳಕೆಯಾಗದ ಯುದ್ಧ ಸಾಮಗ್ರಿ ಸಂಗ್ರಹಣಾ ಕೇಂದ್ರದ​ಲ್ಲಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಖಾರ್ಜ್​ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಸೌದಿ ಅರೇಬಿಯಾದ ಮಾಧ್ಯಮಗಳು ಸ್ಫೋಟ ಸಂಭವಿಸಿರೋದ್ರ ಬಗ್ಗೆ ಅಧಿಕೃತ ವರದಿ ಘೋಷಣೆಯನ್ನ ಮಾಡಿವೆ.

ಮಾಧ್ಯಮಗಳ ವರದಿ ಪ್ರಕಾರ ಈ ಘಟನೆಯಲ್ಲಿ ಯಾವುದೇ ಸಾವು – ನೋವುಗಳು ಸಂಭವಿಸಿಲ್ಲ ಎನ್ನಲಾಗಿದೆ.

ಖಾರ್ಜ್​ ಅಮೆರಿಕ ಪಡೆಗಳಿಗೆ ಆತಿಥ್ಯ ವಹಿಸುವ ಪ್ರಿನ್ಸ್​ ಸುಲ್ತಾನ್​ ವಾಯುನೆಲೆಗೆ ತೀರಾ ಸಮೀಪದಲ್ಲಿದೆ. ಈ ಘಟನೆಯ ಸಂಬಂಧ ಅಮೆರಿಕ ಮಿಲಿಟರಿ ಪಡೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ತುರ್ತು ಪ್ರತಿಕ್ರಿಯೆ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...