alex Certify BIG NEWS: ಸೋಲಾರ್ ಹಗರಣದ ತನಿಖೆಯನ್ನೂ ಮಾಡಲಿ; ತಪ್ಪು ಮಾಡಿದರೆ ನನ್ನನ್ನು ಗಲ್ಲಿಗೇರಿಸಲಿ ಎಂದ ಡಿ.ಕೆ.ಶಿವಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೋಲಾರ್ ಹಗರಣದ ತನಿಖೆಯನ್ನೂ ಮಾಡಲಿ; ತಪ್ಪು ಮಾಡಿದರೆ ನನ್ನನ್ನು ಗಲ್ಲಿಗೇರಿಸಲಿ ಎಂದ ಡಿ.ಕೆ.ಶಿವಕುಮಾರ್

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಹಿನ್ನೆಲೆಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆಗೆ ಹಾಜರಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಡಿ ಸಮನ್ಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದೇವೆ. ನನಗೆ ಹಾಗೂ ನನ್ನ ತಮ್ಮನಿಗೆ ಸಮನ್ಸ್ ನೀಡಿದ್ದರು. ಕಾಲಾವಕಾಶ ಕೇಳಿದರೂ ಕೊಟ್ಟಿಲ್ಲ. ಹಾಗಾಗಿ ಇಂದೇ ವಿಚಾರಣೆಗೆ ಹಾಜರಾಗಿದ್ದೇವೆ ಎಂದರು.

ಅವರು ಯಾವ ವಿಚಾರ ಕೇಳುತ್ತಾರೆ ಗೊತ್ತಿಲ್ಲ. ನಾವು ಕಾನೂನನ್ನು ಗೌರವಿಸಿ ವಿಚಾರಣೆಗೆ ಹಾಜರಾಗಿದ್ದೇವೆ. ಸೋಲಾರ್ ಹಗರಣದ ತನಿಖೆಯನ್ನೂ ಮಾಡಲಿ. ನಾನು ತಪ್ಪು ಮಾಡಿದ್ದರೆ ನನ್ನಗೆ ಗಲ್ಲಿಗೇರಿಸಲಿ. ಸಿಬಿಐ ಸೇರಿ ಯಾವ ಸಂಸ್ಥೆಯಿಂದಾದರೂ ತನಿಖೆ ನಡೆಸಲಿ ಯಾವುದೇ ಆತಂಕವೂ ಇಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...