alex Certify BIG NEWS: ಸುಮಲತಾ ‘ನಟೋರಿಯಸ್’ಸಂಸದೆ; ದೇಶದ್ರೋಹಿ ಎಂಬುದನ್ನು ಸಾಬೀತು ಮಾಡಿದ್ದಾರೆ; ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುಮಲತಾ ‘ನಟೋರಿಯಸ್’ಸಂಸದೆ; ದೇಶದ್ರೋಹಿ ಎಂಬುದನ್ನು ಸಾಬೀತು ಮಾಡಿದ್ದಾರೆ; ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

ಮೈಸೂರು: ಕೆ.ಆರ್.ಎಸ್. ಡ್ಯಾಂ ನಲ್ಲಿ ಬಿರುಕು ಎಂಬ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಅಧಿಕಾರಿಗಳೊಂದಿಗೆ ಕೆ.ಆರ್.ಎಸ್. ಗೆ ತರಳಿ ಪರಿಶೀಲನೆ ನಡೆಸಿದ ಶಾಸಕ ರವೀಂದ್ರಶ್ರೀಕಂಠಯ್ಯ, ಸುಮಲತಾ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಸುಮಲತಾ ಅವರದ್ದು ಎಷ್ಟು ನಟೋರಿಯಸ್ ಬಿಹೇವಿರ್ ಎಂಬುದು ಗೊತ್ತು. ಕೆ.ಆರ್.ಎಸ್. ಡ್ಯಾಂ ಗೆ ಅಡ್ಡಲಾಗಿ ನಿಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದು ಬೇರೆ ದಾಟಿಯಲ್ಲಿ ಅದನ್ನು ಸುಮಲತಾ ತಮಗೆ ಬೇಕಾದಂತೆ ತಿರುಗಿಸಿ ಮಹಿಳೆ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದರು, ಗೌರವವಿಲ್ಲ ಎಂಬ ನಾಟಕೀಯ ಹೇಳಿಕೆಗಳನ್ನು ನೀಡುತ್ತಾ ಅದನ್ನೆ ದೊಡ್ಡ ವಿಚಾರವಾಗಿ ಮಾಡಿದರು. ನಾನು ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಬಗ್ಗೆ ಪಾಸಿಟಿವ್ ಆಗಿ ಮಿಸೈಲ್ ಎಂಬ ಹೇಳಿಕೆ ನೀಡಿದ್ದೆ ಅದನ್ನು ಬೇರೆ ರೀತಿಯಲ್ಲಿ ಮಾತನ್ನು ತಿರುಗಿಸಿ, ತನಗೆ ಅನ್ವಯವಾಗುವಂತೆ ಹೇಳಿದ್ದಾರೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ನಟನೆ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸುಮಲತಾ ಅವರ ಈ ನಟನಾ ಪ್ರತಿಭೆಗೆ ಪ್ರಶಸ್ತಿ ನೀಡಲೇಬೇಕು. ಇದರಲ್ಲೇ ಗೊತ್ತಾಗುತ್ತಿದೆ ಅವರೆಂತ ನಟೋರಿಯಸ್ ಎಂಬುದು ಎಂದು ಗುಡುಗಿದರು.

BIG NEWS: ಇಂಥಾ ಆಕ್ಟಿಂಗ್ ಬಹಳ ದಿನ ನಡೆಯಲ್ಲ; ಸುಮಲತಾಗೆ ಟಾಂಗ್ ನೀಡಿದ ಶಾಸಕ ಅನ್ನದಾನಿ

ಕೆ.ಆರ್.ಎಸ್.ನಲ್ಲಿ ಬಿರುಕು ಎಂದು ಹೇಳಿಕೆ ನೀಡಿ ಆತಂಕ ಸೃಷ್ಟಿಸಿದರು. ಇಷ್ಟು ವರ್ಷದಿಂದ ನಾವು ನೋಡುತ್ತಿದ್ದೇವೆ ನಮಗ್ಯಾರಿಗೂ ಕಾಣದ ಬಿರುಕು ಸುಮಲತಾಗೊಬ್ಬರಿಗೆ ಕಂಡಿದ್ದು ಹೇಗೆ? ಕೆ.ಆರ್.ಎಸ್. ರಾಷ್ಟ್ರೀಯ ಸಂಪತ್ತು ಸರಿಯಾದ ಮಾಹಿತಿ ಇಲ್ಲದೇ ಸುಳ್ಳು ಹೇಳಿಕೆಗಳನ್ನು ನೀಡಿ ಆತಂಕ ಸೃಷ್ಟಿ ಮಾಡಿರುವುದು ದೇಶ ದ್ರೋಹದಷ್ಟೇ ಅಪರಾದ. ಸುಮಲತಾ ದೇಶದ್ರೋಹಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆದದ್ದು ಅಂಬರೀಶ್ ಕಾಲದಲ್ಲಿ ಅವರೇ ಸ್ವತ: ಬಂದು ಪರಿಶೀಲಿಸಿದ್ದರೂ ಸುಮ್ಮನಿದ್ದರು. ಈ ಗೊಂದಲದಿಂದಲೇ ಅಂಬರೀಶ್ ಎರಡು ಬಾರಿ ಸೋತರು. ಪತಿ ಅಂಬರೀಶ್ ಕಾಲದಲ್ಲಿ ನಡೆದ ಅಕ್ರಮದ ಹೊಣೆಹೊತ್ತು ಸುಮಲತಾ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...