alex Certify BIG NEWS: ಸಿಲಿಕಾನ್ ಸಿಟಿಯಲ್ಲಿ ಸರಣಿ ಅಪಘಾತ ಮಾಡಿದ್ದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಾರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಲಿಕಾನ್ ಸಿಟಿಯಲ್ಲಿ ಸರಣಿ ಅಪಘಾತ ಮಾಡಿದ್ದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಾರು…!

ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಫೆ.7ರಂದು ನಡೆದಿದ್ದ ಸರಣಿ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಅಪಘಾತ ಮಾಡಿರುವ ಕಾರು ಬಾಲಿವುಡ್ ನಟಿ ಶಿಲ್ಪಾ ಶಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸೇರಿದ್ದು ಎಂಬ ವಿಷಯ ಈಗ ಬಹಿರಂಗವಾಗಿದೆ.

ಕಬ್ಬನ್ ಪಾರ್ಕ್ ಬಳಿ ಐಷಾರಾಮಿ ಕಾರೊಂದು ಆಟೋ, ದ್ವಿಚಕ್ರ ವಾಹನಕ್ಕೆ ಸರಣಿ ಅಪಘಾತ ಮಾಡಿ ಪರಾರಿಯಾಗಿತ್ತು. ಈ ಕುರಿತು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪಘಾತವೆಸಗಿದ್ದ ಕಾರಿನ ಬಗ್ಗೆ ಆರ್.ಟಿ.ಒ. ಮೂಲಕ ಪರಿಶೀಲಿಸಿದಾಗ ಕಾರು ರಾಜ್ ಕುಂದ್ರಾ ಹೆಸರಲ್ಲಿರುವುದು ಪತ್ತೆಯಾಗಿದೆ. ಕಾರು ಚಲಾಯಿಸುತ್ತಿದ್ದ ಆರೋಪಿ ಮಹಮ್ಮದ್ ಸದ್ದಾಂ ಅಪಘಾತದ ಬಳಿಕ ತಲೆಮರೆಸಿಕೊಂಡಿದ್ದಾನೆ.

‘ರಾಬರ್ಟ್’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ರಾಜ್ ಕುಂದ್ರಾ ಮುಂಬೈ ಕಾರ್ ಡೀಲರ್ ಮೂಲಕ ತಮ್ಮ ಕಾರನ್ನು ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಕಾರ್ ಡೀಲರ್ ಗೆ ಮಾರಾಟ ಮಾಡಿದ್ದರು. ನಾಲ್ಕು ತಿಂಗಳು ಕಳೆದರೂ ಕಾರಿನ ದಾಖಲೆಗಳು ಇನ್ನೂ ರಾಜ್ ಕುಂದ್ರಾ ಹೆಸರಲ್ಲಿಯೇ ಇರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...