alex Certify BIG NEWS: ಸಿದ್ದರಾಮಯ್ಯ ಗುರುನೂ ಅಲ್ಲ, ನಾನು ಅವರ ಶಿಷ್ಯನೂ ಅಲ್ಲ; ವರ್ತೂರು ಪ್ರಕಾಶ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ಗುರುನೂ ಅಲ್ಲ, ನಾನು ಅವರ ಶಿಷ್ಯನೂ ಅಲ್ಲ; ವರ್ತೂರು ಪ್ರಕಾಶ್ ವಾಗ್ದಾಳಿ

ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮೂಲಕ ಕೋಲಾರದಿಂದ ಸ್ಪರ್ಧಿಸಲು ಸಜ್ಜಾಗಿದ್ದು, ಬಿಜೆಪಿ ನಾಯಕರು, ಮಾಜಿ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಇದೀಗ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಿದ್ದರಾಮಯ್ಯನವರಿಗೆ ಆಶ್ರಯ ಕೊಟ್ಟವರೇ ನಾವು. ಅವರು ನಮ್ಮ ಗುರುವೂ ಅಲ್ಲ, ನಾವು ಅವರ ಶಿಷ್ಯರೂ ಅಲ್ಲ. ಅವರು ಪಕ್ಷಕ್ಕೆ ಬಂದಾಗ ಆಶ್ರಯ ಕೊಟ್ಟಿದ್ದೇವೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ನಲ್ಲಿದ್ದರು. ಅವರು ಜೆಡಿಎಸ್ ಬಿಟ್ಟು ಬಂದಾಗ ಕಾಂಗ್ರೆಸ್ ನಲ್ಲಿ ನಾವು ಆಶ್ರಯ ಕೊಟ್ಟಿದ್ದೇವೆ. ಕಾಂಗ್ರೆಸ್ ಗೆ ಬಂದಾಗ ಶಕ್ತಿ ಮೀರಿ ಅವರನ್ನು ಗೆಲ್ಲಿಸಿದ್ವಿ. ಆದರೆ ಅವರಿಂದ ನಮಗೆ ಯಾವುದೇ ಸಹಾಯ ಆಗಲಿಲ್ಲ. ಎರಡೆರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದೇನೆ. 25 ಸಾವಿರ ಮತಗಳ ಅಂತರದಿಂದ ಗೆದ್ದು ಆಯ್ಕೆಯಾಗಿದ್ದೆ. ನಾನು ಅವರಂತೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದವನಲ್ಲ. ಸಿದ್ದರಾಮಯ್ಯ ನನ್ನ ಗುರುವೂ ಅಲ್ಲ, ನಾನು ಅವರ ಶಿಷ್ಯನೂ ಅಲ್ಲ ಎಂದು ಹೇಳಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಈ ಬಾರಿ ಕೋಲಾರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...