alex Certify BIG NEWS: ಸಿದ್ದರಾಮಯ್ಯ ಒಂದು ಕಲ್ಲಲ್ಲಿ 2 ಹಕ್ಕಿ ಹೊಡೆದ್ರೋ ಅಥವಾ ಅವರಿಗೆ ಅವರೇ ಹೊಡೆದುಕೊಂಡ್ರೋ ಎಂಬುದು ಗೊತ್ತಾಗುತ್ತೆ; ವಿಪಕ್ಷ ನಾಯಕನಿಗೆ HDK ಟಕ್ಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ಒಂದು ಕಲ್ಲಲ್ಲಿ 2 ಹಕ್ಕಿ ಹೊಡೆದ್ರೋ ಅಥವಾ ಅವರಿಗೆ ಅವರೇ ಹೊಡೆದುಕೊಂಡ್ರೋ ಎಂಬುದು ಗೊತ್ತಾಗುತ್ತೆ; ವಿಪಕ್ಷ ನಾಯಕನಿಗೆ HDK ಟಕ್ಕರ್

Who is HD Kumaraswamy, the current Chief Minister of Karnataka - Education Today News

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ತಮಗೆ ತಾವೇ ಹೊಡೆದುಕೊಂಡಿದ್ದಾರೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆದ್ರೋ ಅಥವಾ ಅವರೇ ಹೊಡೆದುಕೊಂಡ್ರೋ ಎಂಬುದು ಜೂನ್ 10ರ ರಾಜ್ಯಸಭಾ ಚುನಾವಣಾ ಫಲಿತಾಂಶದ ಬಳಿಕ ಗೊತ್ತಾಗುತ್ತೆ ಎಂದು ಹೇಳಿದರು.

BIG NEWS: ಪಠ್ಯ ಪುಸ್ತಕ ಸಮಿತಿಯಿಂದ ಮತ್ತೊಂದು ಎಡವಟ್ಟು; ಎರಡೂ ತರಗತಿಗಳಿಗೆ ಒಂದೇ ಪದ್ಯ

ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ 32 ಶಾಸಕರಿದ್ದಾರೆ. ಕೆಲವರಿಗೆ ಅಸಮಾಧಾನವಿದೆ ನಿಜ. ಹಾಗಂತ ಅವರ್ಯಾರೂ ಜೆಡಿಎಸ್ ಬದಲು ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ. ಹಿಂದೆ ಅಡ್ಡಮತದಾನ ಪ್ರಯತ್ನ ಮಾಡಿದಂತೆ ಈ ಬಾರಿ ಅಂತಹ ಪ್ರಯತ್ನ ನಡೆಯಲ್ಲ ಎಂದು ಹೇಳಿದರು.

ಇನ್ನು ಪರಿಷತ್ ನ ಪಶ್ಚಿಮ ಹಾಗೂ ವಾಯುವ್ಯ ಶಿಕ್ಷಕರ ಚುನಾವಣೆ ವಿಚಾರವಾಗಿ ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಾಗುವುದು. ಬಿಜೆಪಿ ಅಭ್ಯರ್ಥಿ ಸಾಧನೆ ಬಗ್ಗೆ ಜಾಹೀರಾತು ಗಮನಿಸಿದ್ದೇನೆ. ಅವರು ಹೇಳಿಕೊಂಡಿರುವಂತೆ ಯಾವುದೇ ಸಾಧನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...