alex Certify BIG NEWS: ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ; 130 ಸೀಟ್ 70 ಆಗಿದ್ದೇಕೆ…? ಮಾಜಿ ಸಿಎಂಗೆ ಈ ಸ್ಥಿತಿ ಬರಬಾರದಿತ್ತು ಎಂದು ಕುಟುಕಿದ ʼಹಳ್ಳಿ ಹಕ್ಕಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ; 130 ಸೀಟ್ 70 ಆಗಿದ್ದೇಕೆ…? ಮಾಜಿ ಸಿಎಂಗೆ ಈ ಸ್ಥಿತಿ ಬರಬಾರದಿತ್ತು ಎಂದು ಕುಟುಕಿದ ʼಹಳ್ಳಿ ಹಕ್ಕಿʼ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕ್ಷೇತ್ರಕ್ಕಾಗಿ ಹುಡುಕಾಡುವ ಪರಿಸ್ಥಿತಿ ಬಂದಿದೆ. ಮಾಜಿ ಸಿಎಂ ಓರ್ವರಿಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಎಂ.ಎಲ್.ಸಿ. ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

BIG NEWS: ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ; 64,527 ಜನರು ಡಿಸ್ಚಾರ್ಜ್; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ಆರಂಭವಾಗಿದೆ. ಈ ಸಂದರ್ಭದಲ್ಲಿ ಈ ಚರ್ಚೆಯೇ ಸರಿಯಲ್ಲ. ಅಷ್ಟಕ್ಕೂ ಸಿದ್ದರಾಮಯ್ಯ ಸಿಎಂ ಆದವರು. ಕಾಂಗ್ರೆಸ್ ನಲ್ಲಿ ಬೇರೆ ನಾಯಕರೂ ಇದ್ದಾರೆ. ಸಿಎಂ ಆಗಿದ್ದವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಸೋಲಲು ಕಾರಣವೇನು? ಶಿಷ್ಯಂದಿರು ಎಲ್ಲವನ್ನೂ ಮಾತನಾಡುತ್ತಾರೆ. 150 ಸೀಟ್ ಬರುತ್ತೆ ಎಂದೂ ಹೇಳುತ್ತಾರೆ. ಆದರೆ 130 ಇದ್ದಿದ್ದು, 70 ಆಗಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.

ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರು ಮಂದಿ ಅರೆಸ್ಟ್

ಸಿದ್ದರಾಮಯ್ಯ ಮೊದಲು ಗೆಲ್ಲಲಿ. ಆಮೇಲೆ ಸಿಎಂ ಸ್ಥಾನದ ಬಗ್ಗೆ ಚರ್ಚೆಯಾಗಲಿ. ಮುಖ್ಯಮಂತ್ರಿ ಸ್ಥಾನ ಎಂದರೆ ಉಂಡು ಬಿಸಾಡುವುದಲ್ಲ. ಸ್ವಚ್ಛವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ನೀಡಬೇಕು. ಬೇರೆ ಪಕ್ಷದಿಂದ ಬಂದಿದ್ದರೂ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಅವಕಾಶ ಸಿಗಬೇಕು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಎಲ್ಲಾ ಇದ್ದಾರೆ. ಹಾಗಾಗಿ ಅವರಿಗೂ ಅವಕಾಶ ಸಿಗಲಿ. ಅದನ್ನು ಬಿಟ್ಟು ಸಿದ್ದರಾಮಯ್ಯನವರು ಜಮೀರ್ ಅಹ್ಮದ್ ಮುಂದಿಟ್ಟುಕೊಂಡು ಹೇಳಿಕೆಗಳನ್ನು ಕೊಡಿಸುವುದು ಸರಿಯಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...