ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡದಂತೆ ಮಠಾಧೀಶರು ಒತ್ತಾಯಿಸುತ್ತಿದ್ದು, ಈ ನಿಟ್ಟಿನಲ್ಲಿ ಬೆಂಬಲ ವ್ಯಕ್ತಪಡಿಸಿರುವ ಸ್ವಾಮೀಜಿಗಳು ಕಳೆದ ಮೂರು ದಿನಗಳಿಂದ ಸಿಎಂ ಭೇಟಿಯಾಗಿ ಚರ್ಚಿಸಿದ್ದಾರೆ. ಮಠಾಧೀಶರ ಬೆಂಬಲಕ್ಕೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ, ಎಲ್ಲರೂ ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಡಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಯಡಿಯೂರಪ್ಪನವರಿಗೆ ಮಠಾಧೀಶರ ಬೆಂಬಲ ಸ್ವಾಗತಾರ್ಹ. ಆದರೆ ಯಡಿಯೂರಪ್ಪ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧ, ಅವರು ಹೇಳಿದಂತೆ ಕೆಲಸ ಮಾಡುತ್ತೆನೆ ಎಂದಿದ್ದಾರೆ. ಹಾಗಾಗಿ ಯಡಿಯೂರಪ್ಪನವರ ಮಾತನ್ನು ನಾವು ಕೇಳಬೇಕು. ಅವರಿಗೆ ಮುಜುಗರವಾಗುವಂತೆ ನಡೆದುಕೊಳ್ಳಬಾರದು ಎಂದು ಹೇಳಿದರು.
ವಿಚಿತ್ರ ಪ್ರೇಮ ಕಥೆ: ಮದುವೆಯಾದ 17 ದಿನಕ್ಕೆ ಪತ್ನಿಯನ್ನು ಪ್ರೇಮಿಗೊಪ್ಪಿಸಿದ ಪತಿ….!
ಈ ನಡುವೆ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ ಇಂದು ಸಚಿವ ಈಶ್ವರಪ್ಪ ಮನೆಗೆ ಭೇಟಿ ನೀಡಿ ಚರ್ಚಿಸಿದ್ದು, ಈ ವೇಳೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಸಿಎಂ ಬಿ ಎಸ್ ವೈಗೆ ನಮ್ಮ ಬೆಂಬಲವಿದೆ. ಆದರೆ ಆಯಾ ಪಕ್ಷಕ್ಕೆ ಅವರದ್ದೇ ಆದ ಸಿದ್ಧಾಂತಗಳಿವೆ. ಕಾದು ನೋಡಬೇಕು. ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ್ದು ಯಡಿಯೂರಪ್ಪನವರ ಚರ್ಚೆಗಾಗಿ ಅಲ್ಲ ಎಂದು ತಿಳಿಸಿದರು.