alex Certify ವಿಚಿತ್ರ ಪ್ರೇಮ ಕಥೆ: ಮದುವೆಯಾದ 17 ದಿನಕ್ಕೆ ಪತ್ನಿಯನ್ನು ಪ್ರೇಮಿಗೊಪ್ಪಿಸಿದ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಪ್ರೇಮ ಕಥೆ: ಮದುವೆಯಾದ 17 ದಿನಕ್ಕೆ ಪತ್ನಿಯನ್ನು ಪ್ರೇಮಿಗೊಪ್ಪಿಸಿದ ಪತಿ….!

ಜಾರ್ಖಂಡದ ರಾಜಧಾನಿ ರಾಂಚಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾದ 17 ದಿನಗಳ ನಂತ್ರ ಪತಿ, ತನ್ನ ಪತ್ನಿಯನ್ನು ಆಕೆ ಪ್ರೇಮಿಗೆ ಹಸ್ತಾಂತರಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಅಗ್ರಿಮೆಂಟ್ ನಡೆದಿದೆ.

ಮದುವೆಯಾದ 17 ದಿನಗಳ ನಂತ್ರ ವಧು, ಮನೆಯಿಂದ ಪರಾರಿಯಾಗಿದ್ದಳು. ಈ ಬಗ್ಗೆ ವರನ ಕಡೆಯವರು ವಧುವಿನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಅಂದಾಜಿನ ಮೇಲೆ ವಧು ಕಡೆಯವರು, ಹುಡುಗಿ ಪ್ರೇಮಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ವಧು ಅಲ್ಲಿ ಸಿಕ್ಕಿದ್ದಾಳೆ. ಪ್ರೇಮಿ ಜೊತೆ ವಧು ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆಂಬ ವಿಷ್ಯ ಬಹಿರಂಗಗೊಂಡಿದೆ.

ವಧುವಿನ ಮನವೊಲಿಸಲು ಎಲ್ಲರೂ ಪ್ರಯತ್ನ ನಡೆಸಿದ್ದಾರೆ. ಸಂಪ್ರದಾಯದ ಬಗ್ಗೆ ಬುದ್ದಿ ಹೇಳಿದ್ದಾರೆ. ಆದ್ರೆ ಪ್ರೇಮಿ ಜೊತೆ ಜೀವನ ನಡೆಸುವ ಹಠವನ್ನು ವಧು ಬಿಡಲಿಲ್ಲ. ಇಬ್ಬರ ಪ್ರೀತಿಗೆ ಸೋತ ಪತಿ, ಪತ್ನಿ ಬಿಡಲು ಮುಂದಾಗಿದ್ದಾನೆ. ಪ್ರೇಮಿ ಜೊತೆ ವಾಸಿಸಲು ಒಪ್ಪಿಗೆ ನೀಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿದೆ. ಪ್ರೇಮಿ ಜೊತೆ ವಾಸಿಸಲು ಪತ್ನಿಗೆ ಅನುಮತಿ ನೀಡಿರುವುದಾಗಿ ಪತಿ ಕಾಗದದ ಮೇಲೆ ಬರೆದು ಸಹಿ ಹಾಕಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...