ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿರುವ ಆಹಾರ ಸಚಿವ ಉಮೇಶ್ ಕತ್ತಿ, ಸಿಎಂ ಹುದ್ದೆ ಖಾಲಿಯಾದ್ರೆ ನೆಕ್ಸ್ಟ್ ನಾನೇ ಇದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸ್ಥಾನದ ಆಸೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಮುಖ್ಯಮಂತ್ರಿಯಾಗಲು ನನಗೆ ಎಲ್ಲಾ ಅರ್ಹತೆಗಳಿವೆ. ನನ್ನ ವಿರುದ್ಧ ಯಾವುದೆ ಕಳಂಕದ ಆರೋಪವಿಲ್ಲ, 8 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಅನುಭವವಿದೆ. ಸಿಎಂ ಹುದ್ದೆ ಖಾಲಿಯಾದರೆ ನಂತರ ನಾನೇ ಇದ್ದೇನೆ. ಹೈಕಮಾಂಡ್ ಮನಸ್ಸು ಮಾಡಿದರೆ ಸಿಎಂ ಆಗಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ 2020: ಜಪಾನ್ನಲ್ಲಿ ಕಠಿಣಾಭ್ಯಾಸದಲ್ಲಿ ನಿರತರಾದ ಭಾರತದ ಆರ್ಚರಿ ಆಟಗಾರರು
ಮುಖ್ಯಮಂತ್ರಿಗಳನ್ನು ಯಾರು ಬದಲಾವಣೆ ಮಾಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ, ಆದರೆ ಒಂದು ವೇಳೆ ಬದಲಾವಣೆಯಾದರೆ ತಾನೂ ಕೂಡ ಸಿಎಂ ಹುದ್ದೆ ರೇಸ್ ನಲ್ಲಿರುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.