alex Certify ಟೋಕಿಯೋ ಒಲಿಂಪಿಕ್ಸ್ 2020: ಜಪಾನ್​ನಲ್ಲಿ ಕಠಿಣಾಭ್ಯಾಸದಲ್ಲಿ ನಿರತರಾದ ಭಾರತದ ಆರ್ಚರಿ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್ 2020: ಜಪಾನ್​ನಲ್ಲಿ ಕಠಿಣಾಭ್ಯಾಸದಲ್ಲಿ ನಿರತರಾದ ಭಾರತದ ಆರ್ಚರಿ ಆಟಗಾರರು

Tokyo Games: Archer Deepika Kumari Enters Olympics As World No.1, Among  India's Strongest Medal Contenders | Olympics Newsಭಾರತದ ಸ್ಟಾರ್​ ಆರ್ಚರಿ ಆಟಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಅಟಾನು ದಾಸ್​​ ಒಲಿಂಪಿಕ್ಸ್​ ಪಂದ್ಯಾವಳಿಗೂ ಮುನ್ನ ಟೋಕಿಯೋದಲ್ಲಿ ತರಬೇತಿಯನ್ನ ಆರಂಭಿಸಿದ್ದಾರೆ. ರವಿವಾರ ಭಾರತದ ಮೊದಲ ಒಲಿಂಪಿಕ್ಸ್​ ಬ್ಯಾಚ್​ ಟೋಕಿಯೋಗೆ ಬಂದಿಳಿದಿತ್ತು. ಮೊದಲ ಬ್ಯಾಚ್​ನಲ್ಲಿದ್ದ ಭಾರತದ ಈ ಇಬ್ಬರು ಸ್ಟಾರ್​ ಆರ್ಚರಿ ಆಟಗಾರರು ಇದೀಗ ತಮ್ಮ ತರಬೇತಿಗೆ ಅಣಿಯಾಗಿದ್ದಾರೆ.

ಶನಿವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೋಕಿಯೋಗೆ ತೆರಳಬೇಕಿದ್ದ ಒಲಿಂಪಿಕ್ಸ್​ ತಂಡದ ಮೊದಲ ಬ್ಯಾಚ್​ ಆಟಗಾರರಿಗೆ ಔಪಚಾರಿಕ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ಆಟಗಾರರೆಲ್ಲ ಪ್ರಸ್ತುತ ಜಪಾನ್​ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿದ್ದಾರೆ. 88 ಆಟಗಾರರಿದ್ದ ಈ ಬ್ಯಾಚ್​ನ ಪ್ರತಿಯೊಬ್ಬ ಸದಸ್ಯರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್​ ಬಂದಿದೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ 5 ವಿಭಾಗಗಳಲ್ಲಿ ಆರ್ಚರಿ ಪಂದ್ಯ ನಡೆಯಲಿದೆ. ಪುರುಷರ ವಿಭಾಗ, ಮಹಿಳೆಯ ವಿಭಾಗ, ಪುರುಷರ ಗುಂಪು, ಮಹಿಳೆಯರ ಗುಂಪು ಹಾಗೂ ಮಿಶ್ರ ಡಬಲ್ಸ್​ನಲ್ಲಿ ಈ ಆರ್ಚರಿ ಪಂದ್ಯ ನಡೆಯಲಿದೆ. ಯುಮೆನೋಶಿಮಾ ಪಾರ್ಕ್​ನ ಆರ್ಚರಿ ಮೈದಾನದಲ್ಲಿ ಜುಲೈ 23ರಿಂದ ಆರಂಭವಾಗುವ ಈ ಪಂದ್ಯಗಳು ಜುಲೈ 31ರವರೆಗೂ ನಡೆಯಲಿದೆ.

ಆರ್ಚರಿ ವಿಭಾಗದಲ್ಲಿ ಇಲ್ಲಿಯವರೆಗೂ ಭಾರತ ಒಲಿಂಪಿಕ್ಸ್ ಪದಕವನ್ನ ಸಂಪಾದಿಸಿಲ್ಲ. ಈ ಬಾರಿ ಸ್ಟಾರ್​ ಆಟಗಾರರನ್ನೇ ಹೊಂದಿರುವ ಭಾರತ ಆರ್ಚರಿಯಲ್ಲಿ ವಿಶೇಷ ಸಾಧನೆಯನ್ನ ಮಾಡುವ ವಿಶ್ವಾಸದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...