alex Certify BIG NEWS: ಸಾಹಿಬಾಬಾದ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ; ಗೆಲುವಿನ ನಗೆ ಬೀರಿದ ಸುನಿಲ್ ಕುಮಾರ್ ಶರ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಹಿಬಾಬಾದ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ; ಗೆಲುವಿನ ನಗೆ ಬೀರಿದ ಸುನಿಲ್ ಕುಮಾರ್ ಶರ್ಮ

ಉತ್ತರ ಪ್ರದೇಶದ ಸಾಹಿಬಾಬಾದ್​ ವಿಧಾನಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆ ಮುಗಿದಿದೆ. ಬಿಜೆಪಿಯ ಸುನೀಲ್​ ಶರ್ಮಾ, ಸಮಾಜವಾದಿ ಪಕ್ಷದ ಅಮರ್​ಪಾಲ್​ ಶರ್ಮಾ, ಕಾಂಗ್ರೆಸ್​​ನ ಸಂಗೀತಾ ತ್ಯಾಗಿ, ಬಿಎಸ್​ಪಿಯ ಅಮಿತ್​ ಕುಮಾರ್​ ಪಾಲ್​ ಹಾಗೂ ಆಪ್​​ನ ಛವಿ ಯಾದವ್​ ನಡುವೆ ನಡೆದ ಹೋರಾಟದಲ್ಲಿ ಸುನೀಲ್​ ಕುಮಾರ್​ ಶರ್ಮಾ ಗೆಲುವು ದಾಖಲಿಸಿದ್ದಾರೆ.

2017ರಲ್ಲಿ ಸಾಹಿಬಾಬಾದ್​ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಬಿಜೆಪಿಯ ಸುನೀಲ್​​ ಕುಮಾರ್​ ಶರ್ಮಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ನ ಅಮರ್​ಪಾಲ್​​ 1,50,685 ಮತಗಳ ಅಂತರದಿಂದ ಸೋಲಿಸಿದ್ದರು. 2012ರಲ್ಲಿ ಬಹುಜನ ಸಮಾಜ ಪಕ್ಷದ ಅಮರ್​ಪಾಲ್​ ಬಿಜೆಪಿಯ ಸುನೀಲ್​ ಕುಮಾರ್​ರನ್ನು 24,348 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಕೂಡ ಅಮರ್​ ಪಾಲ್​ ಹಾಗೂ ಸುನೀಲ್​ ಕುಮಾರ್​ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿತ್ತು.

2017ರಲ್ಲಿ ಸುನೀಲ್​ ಶರ್ಮಾ ಅಮರ್​ಪಾಲ್​ರನ್ನು ಸೋಲಿಸಿದ್ದರು. 2012ರಲ್ಲಿ ಬಿಎಸ್​ಪಿಯ ಅಮರ್​ಪಾಲ್ ಸುನೀಲ್​ ಕುಮಾರ್​ರನ್ನು ಸೋಲಿಸಿದ್ದರು. ಸುನೀಲ್​ ಕುಮಾರ್​​ ಪ್ರಸ್ತುತ ಯೋಗಿ ಸರ್ಕಾರದಲ್ಲಿ ಶಾಸಕ ಕೂಡ ಆಗಿದ್ದರು. ಇದೀಗ ಮತ್ತೊಮ್ಮೆ ಚುನಾವಣೆಯನ್ನು ಗೆದ್ದಿದ್ದಾರೆ.

ಸಮಾಜವಾದಿ ಪಕ್ಷದಿಂದ ಅಮರ್​ಪಾಲ್​ ಶರ್ಮಾ ಕಣಕ್ಕಿಳಿದಿದ್ದರು. ಇವರು ಮೊದಲು ಬಿಎಸ್ಪಿಯಲ್ಲಿದ್ದರು. ಇದಾದ ಬಳಿಕ ಐಎನ್​ಸಿ ಸೇರ್ಪಡೆಯಾಗಿದ್ದ ಅಮರ್​ಪಾಲ್​ ಬಳಿಕ ಸಮಾಜವಾದಿ ಪಕ್ಷವನ್ನು ಸೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...