alex Certify BIG NEWS: ಸಾಲುಮರದ ತಿಮ್ಮಕ್ಕನಿಗೆ ಬಿಡಿಎ ನಿವೇಶನ; ಕ್ರಯಪತ್ರ ಹಸ್ತಾಂತರಿಸಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಲುಮರದ ತಿಮ್ಮಕ್ಕನಿಗೆ ಬಿಡಿಎ ನಿವೇಶನ; ಕ್ರಯಪತ್ರ ಹಸ್ತಾಂತರಿಸಿದ ಸಿಎಂ

ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಪರಿಸರವಾದಿ ಸಾಲುಮರದ ತಿಮ್ಮಕ್ಕನವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡಿಎ ನಿವೇಶನ ಹಂಚಿಕೆ ಮಾಡಿದ್ದಾರೆ.

ನಿವೇಶನಕ್ಕಾಗಿ ಕೆಲ ದಿನಗಳ ಹಿಂದಷ್ಟೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ನಿವೇಶನ ಹಂಚಿಕೆ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಬಿಡಿಎ ಅಧಿಕಾರಿಗಳಿಗೆ ಸೂಚಿಸಿದ್ದರು. ಕ್ರಯಪತ್ರವನ್ನು ಸಿದ್ಧಪಡಿಸುವಂತೆಯೂ ತಿಳಿಸಿದ್ದರು.

ಇಂದು ಸಿಎಂ ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕನವರಿಗೆ ಬಿಡಿಎ ನಿವೇಶನ ಕ್ರಯ ಪತ್ರವನ್ನು ಹಸ್ತಾಂತರಿಸಿದರು.

ಈ ಮೂಲಕ ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ಜೆ ಸೆಕ್ಟರ್ ನಲ್ಲಿ ಒಟ್ಟು 50#80 ಚದರ ಅಡಿಯ ಬಿಡಿಎ ನಿವೇಶನವನ್ನು ಸಾಲುಮರದ ತಿಮ್ಮಕ್ಕನಿಗೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...