alex Certify BIG NEWS: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್; ಸಿಡಿ ಬೇಕಿದ್ದರೂ ಬಿಡುಗಡೆ ಮಾಡಲಿ ಎಂದ ಶಾಸಕ ಯತ್ನಾಳ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್; ಸಿಡಿ ಬೇಕಿದ್ದರೂ ಬಿಡುಗಡೆ ಮಾಡಲಿ ಎಂದ ಶಾಸಕ ಯತ್ನಾಳ್

ಶಾಸಕರ ಭಾವನೆಗೆ ಅವಕಾಶ ನೀಡಿ: ಬಸನಗೌಡ ಪಾಟೀಲ್ ಯತ್ನಾಳ್ ಪತ್ರ | Vijayapura: BJP MLA Basana Gowda Patil Yatnal Letter To BJP President Nalin Kumar Kateel - Kannada Oneindia

ವಿಜಯಪುರ: ಜಾಲತಾಣಗಳಲ್ಲಿ ತಮ್ಮ ಫೋಟೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದರ ಹಿಂದೆ ಯಾರಿದ್ದಾರೆ, ಯಾರ ಕೈವಾಡವಿದೆ ಎಂದು ಗೊತ್ತಿದೆ, ಸಿಡಿ ಇದ್ದರೂ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಫೋಟೋ ವೈರಲ್ ವಿಚಾರವಾಗಿ ಯಾರ್ಯಾರು ಇದ್ದಾರೆ ಎಂಬುದು ನನಗೆ ದಾಖಲೆ ಸಮೇತ ಮಾಹಿತಿ ಇದೆ. ಅವರಿಗೆ ತಕ್ಕ ಶಾಸ್ತಿ ಆಗುತ್ತೆ. ನಾನು ಭ್ರಷ್ಟಾಚಾರದ ವಿರುದ್ಧ, ಹಿಂದೂತ್ವದ ಪರ ಮಾತನಾಡುತ್ತೇನೆ. ಹಾಗಾಗಿ ನನ್ನ ಮಾತುಗಳು ಅವರಿಗೆ ಸಮಸ್ಯೆಯಾಗಿದೆ. ಫೋಟೋ ವೈರಲ್ ಮಾಡಿದ ಕೃತ್ಯದ ಹಿಂದೆ ಎಲ್ಲಾ ಪಕ್ಷದವರೂ ಇದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಸಿಡಿ ಮಾಡುವ ಫ್ಯಾಕ್ಟರಿ ಇದೆ ಎಂದು ಗುಡುಗಿದರು.

ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ ‘ರಾವಣ’: ವಿಡಿಯೋ ವೈರಲ್

ಫೋಟೋ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಕಳ್ಳರು ಯಾರೆಂಬುದು ಸ್ವಲ್ಪ ದಿನದಲ್ಲೇ ಬಹಿರಂಗವಾಗುತ್ತೆ ಎಂದರು.

ಬಿಜೆಪಿ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ಸು ಕಾಣಲೆಂದು ಆಶಿಸುವೆ ಎಂಬ ಬರಹವಿರುವ ಯತ್ನಾಳ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಿಡಿಕಾರಿರುವ ಯತ್ನಾಳ್, ಸಿಡಿ ಇದ್ದರೆ ಅದನ್ನೂ ಬಿಡುಗಡೆ ಮಾಡಲಿ, ಯಾವುದಕ್ಕೂ ಹೆದರಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...