ಬೆಂಗಳೂರು: ಹಿಜಾಬ್ ವಿವಾದ ಬಳಿಕ ಇದೀಗ ರಾಜ್ಯದಲ್ಲಿ ಹಲಾಲ್ ವಿವಾದ ಆರಂಭವಾಗಿದ್ದು, ಹಲಾಲ್ ಮಾಂಸ ಖರೀದಿಸದಂತೆ ಅಭಿಯಾನ ಆರಂಭವಾಗಿದೆ. ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಹಲಾಲ್ ಮುಸ್ಲಿಂ ಧಾರ್ಮಿಕ ಕ್ರಿಯೆ ಅದನ್ನು ಎಲ್ಲರೂ ಒಪ್ಪಬೇಕೆಂದೇನೂ ಇಲ್ಲ ಎಂದು ಹೇಳಿದ್ದಾರೆ.
ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ…? ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿದೆ ಈ ಗುಟ್ಟು
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಹಲಾಲ್ ಬಹಿಷ್ಕರಿಸುವ ಹಕ್ಕು ನಮಗಿದೆ. ಹಲಾಲ್ ಮುಸ್ಲಿಂರಿಗೆ ಪ್ರಿಯ. ಹಾಗೇ ಅದನ್ನು ಬಹಿಷ್ಕಾರ ಎಂದು ಹೇಳುವ ಹಕ್ಕು ನಮಗಿದೆ. ಅವರಿಗೆ ಇಷ್ಟ ಅಂತಾ ಹಲಾಲ್ ಮಾಂಸವನ್ನು ಎಲ್ಲರೂ ಖರೀದಿಸಬೇಕು, ಒಪ್ಪಬೇಕು ಅಂತೇನೂ ಇಲ್ಲ. ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್. ಹಲಾಲ್ ಇಲ್ಲದ ಮಾಂಸವನ್ನ ಮುಸ್ಲಿಂರು ತಿನ್ನುತ್ತಾರೆ, ಹಲಾಲ್ ಆಗಿರುವ ಮಾಂಸವನ್ನು ಹಿಂದೂಗಳು ತಿನ್ನುತ್ತಾರೆ. ಸಾಮರಸ್ಯ ಎನ್ನುವುದು ಒನ್ ವೇ ಅಲ್ಲ, ಟೂ ವೇ. ಇಲ್ಲಿ ಸಾಮರಸ್ಯದ ಪ್ರಶ್ನೆ ಬರುವುದಿಲ್ಲ ಎಂದರು.
ಹಿಂದಿನ ನಿಯಮಗಳನ್ನೆ ಈಗಲೂ ಒಪ್ಪಿಕೊಳ್ಳಲು ಆಗುತ್ತಾ? ಮುಸ್ಲಿಂರು ಇನ್ನೊಬ್ಬರ ಜತೆ ವ್ಯಾಪಾರ ಮಾಡಬಾರದು. ಹಲಾಲ್ ಮಾಂಸ ಬಹಿಷ್ಕರಿಸಿ ಎಂದರೆ ತಪ್ಪೇನು ? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು, ಅವರ ದೇವರಿಗೆ ಒಪ್ಪಿಸಿದ್ದು ನಮ್ಮ ದೇವರಿಗೆ ಎಂಜಲು. ಹಿಂದೂಗಳ ಅಂಗಡಿಯಿಂದ ಅವರು ಮಾಂಸ ಖರೀದಿಸುತ್ತಾರೆಯೇ? ಎಂದು ಕೇಳಿದ್ದಾರೆ.