alex Certify BIG NEWS: ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ಸುತ್ತಿನ ವಿಭಿನ್ನ ಪೋಸ್ಟರ್ ಅಭಿಯಾನ; ಸಿನಿಮಾ ಸ್ಟೈಲಲ್ಲಿ ಪೋಸ್ಟರ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ಸುತ್ತಿನ ವಿಭಿನ್ನ ಪೋಸ್ಟರ್ ಅಭಿಯಾನ; ಸಿನಿಮಾ ಸ್ಟೈಲಲ್ಲಿ ಪೋಸ್ಟರ್ ಬಿಡುಗಡೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ಸುತ್ತಿನ ಅಭಿಯಾನ ನಡೆಸಿದೆ. ವಿಭಿನ್ನ ರೀತಿಯಲ್ಲಿ 40% ಕಮಿಷನ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ರೋಡಲ್ಲಿ ಯಮಗುಂಡಿ, ಬಿದ್ರೆ ಜೀವನ ಬಂಡಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಸಿಎಂ ಯಮನಂತೆ ಬಿಂಬಿಸಿದೆ. ಈ ಮೂಲಕ ವಿವಿಧ ಚಿತ್ರಗಳ ಮೂಲಕ ಸಿಎಂ ಹಾಗೂ ಸಚಿವರ ವಿರುದ್ಧ ಅಭಿಯಾನ ನಡೆಸಿದೆ.

ಮತ್ತೊಂದು ಪೋಸ್ಟರ್ ನಲ್ಲಿ ಕಿಲಾಡಿ ಜೋಡಿ ಎಂದು ಸಿಎಂ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥನಾರಾಯಣ ಅವರ ಪೋಸ್ಟರ್, ಸರ್ವರ್ ಸೋಮಣ್ಣ ಹೆಸರಲ್ಲಿ ಸಚಿವ ಸೋಮಣ್ಣ, ಚಪಲ ಚನ್ನಿಗರಾಯ ಎಂದು ರಮೇಶ್ ಜಾರಕಿಹೊಳಿ ಪೋಸ್ಟರ್, ಅಡುಗೆ ಭಟ್ಟರಂತೆ ಸಚಿವ ಬಿ.ಸಿ.ನಾಗೇಶ್ ಪೋಸ್ಟರ್ ಪ್ರಕಟಿಸಿದೆ. ಈ ಮೂಲಕ ಕಾಂಗ್ರೆಸ್ ವಿಭಿನ್ನ ರೀತಿಯ ಪೋಸ್ಟರ್ ಅಭಿಯಾನದ ಮೂಲಕ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಣಕವಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...