alex Certify BIG NEWS: ಸಮಸ್ಯೆ ಹೇಳಿದ ಮಹಿಳೆಗೆ ಆವಾಜ್ ಹಾಕಿದ ಬಿಜೆಪಿ ಶಾಸಕ; ಆಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮಸ್ಯೆ ಹೇಳಿದ ಮಹಿಳೆಗೆ ಆವಾಜ್ ಹಾಕಿದ ಬಿಜೆಪಿ ಶಾಸಕ; ಆಡಿಯೋ ವೈರಲ್

ಬೆಳಗಾವಿ: ಜನಪ್ರತಿನಿಧಿಗಳ ಬಳಿ ಜನರು ಸಮಸ್ಯೆಯನ್ನು ಹೇಳಿಕೊಂಡರೆ ಅದನ್ನು ಪರಿಹರಿಸುವುದನ್ನು ಬಿಟ್ಟು ಬಾಯಿಗೆ ಬಂದಂತೆ ಆವಾಜ್ ಹಾಕಿ ಬೆದರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಉತ್ತರ ವಿಧಾನಸಭಾ ಶಾಸಕ ಅನಿಲ್ ಬೆನಕೆ ವಿರುದ್ಧ ಇದೀಗ ಅಂತವುದೊಂದು ಆರೋಪ ಕೇಳಿಬಂದಿದ್ದು, ಮಹಿಳೆಗೆ ಆವಾಜ್ ಹಾಕಿ, ಬೈದಿದ್ದಾರೆ ಎನ್ನಲಾಗಿದೆ. ನಗರದ ಬಾಂಧುರ ಗಲ್ಲಿಯ ಮಹಿಳೆಯೊಬ್ಬರು ಡ್ರೈನೇಜ್ ಹಾಳಾಗಿದೆ ಮನೆ ಮನೆಗೂ ನೀರು ನುಗ್ಗಿ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ದುರಸ್ತಿ ಮಾಡಿಕೊಡುವಂತೆ ಶಾಸಕರಿಗೆ ಫೋನ್ ಮಾಡಿ ಮನವಿ ಮಾಡಿದ್ದಾರೆ.

ಮಹಿಳೆಯ ಮನವಿಗೆ ಗರಂ ಆದ ಶಾಸಕ ಅನಿಲ್, ಆ ಕೆಲಸ, ಈ ಕೆಲಸ ಆಗಬೇಕು ಎನ್ನಲು ನೀವು ಯಾರು? ನಾನು ಕ್ಷೇತ್ರದಲ್ಲಿಲ್ಲ, ಗೋವಾ ಚುನಾವಣಾ ಪ್ರಚಾರದಲ್ಲಿದ್ದೇನೆ ಎಂದು ಏಕವಚನದಲ್ಲಿ ರೇಗಾಡಿದ್ದಾರೆ. ಸಾಮಾಜಿಕ ಜಾಲತಾಣಗಲ್ಲಿ ಶಾಸಕರ ಆಡಿಯೋ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...