ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬಳಿ ಸಮಸ್ಯೆ ಹೇಳಿಕೊಂಡು ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆ ವಿರುದ್ಧವೇ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿರುವ ಘಟನೆ ನಡೆದಿದೆ.
ಶಾಸಕ ಅರವಿಂದ ಲಿಂಬಾವಳಿ ವರ್ತೂರು ಕೆರೆ ಕೋಡಿ ವೀಕ್ಷಣೆಗೆ ತೆರಳಿದ್ದ ವೇಳೆ ಮಹಿಳೆ ರೂತ್ ಮೇರಿ ಎಂಬುವವರು ಮನವಿ ಪತ್ರ ಹಿಡಿದು ಬಂದಿದ್ದರು ಮಹಿಳೆ ಮನವಿ ಪತ್ರ ಕಸಿದುಕೊಂಡ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯನ್ನು ನಿಂದಿಸಿ ಬೈದು ಕಳುಹಿಸಿದ್ದರು. ಇದೀಗ ಮಹಿಳೆ ವಿರುದ್ಧ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ಆರೋಪದಡಿ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಬಿಎಂಪಿ ಕಂದಾಯ ಅಧಿಕಾರಿ ಪಾರ್ಥ ಸಾರಥಿ ಎಂಬುವವರಿಂದ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ.