alex Certify BIG NEWS: ಸದನದಲ್ಲೇ ಡಾನ್ಸ್ ಮಾಡಿದ ಸದಸ್ಯರು; ಇತಿಹಾಸದಲ್ಲೇ ಇಂತ ಘಟನೆ ನೋಡಿಲ್ಲ; ಸಂಸತ್ ಅಧಿವೇಶನದ ಬಗ್ಗೆ ದೇವೇಗೌಡರ ಬೇಸರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸದನದಲ್ಲೇ ಡಾನ್ಸ್ ಮಾಡಿದ ಸದಸ್ಯರು; ಇತಿಹಾಸದಲ್ಲೇ ಇಂತ ಘಟನೆ ನೋಡಿಲ್ಲ; ಸಂಸತ್ ಅಧಿವೇಶನದ ಬಗ್ಗೆ ದೇವೇಗೌಡರ ಬೇಸರ

ಬೆಂಗಳೂರು: ಸಂಸತ್ ಅಧಿವೇಶನದ ವೇಳೆ ಸದಸ್ಯರು ನಡೆದುಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಟ್ಟು ಹೋಗುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ಈ ಬಾರಿ 27 ದಿನಗಳು ಮಾತ್ರ ಸಂಸತ್ ಚಳಿಗಾಲದ ಅಧಿವೇಶನ ನಡೆಯಿತು. ಒಂದು ದಿನವೂ ನಾನು ಗೈರಾಗಿಲ್ಲ, ನನಗೆ ಮಾತನಾಡುವ ಅವಕಾಶ ಸಿಗುತ್ತೆ ಎಂದು ಕಾಯುತ್ತಿದ್ದೆ, ದುರಂತ ಎಂದರೆ ಸುಗಮವಾಗಿ ಅಧಿವೇಶನ ನಡೆಯಲೇ ಇಲ್ಲ. ಚರ್ಚೆಯೇ ನಡೆಯದೇ ಬಿಲ್ ಪಾಸ್ ಮಾಡಲಾಗಿದೆ ಎಂದರು.

14 ರ ಪೋರನ ಬ್ಯಾಸ್ಕೆಟ್‍ ಬಾಲ್ ಪ್ರೀತಿ..! ನೆರೆಹೊರೆಯವರಿಂದ ಸಿಕ್ತು ಸ್ಪೆಷಲ್‌ ಗಿಫ್ಟ್

ಒಂದಿಷ್ಟು ಸದಸ್ಯರು ಸದನದಲ್ಲಿ ಡಾನ್ಸ್ ಕೂಡ ಮಾಡಿದ್ದರು. ಇತಿಹಾಸದಲ್ಲಿಯೇ ಇಂತಹ ಘಟನೆ ನಾನು ನೋಡಿರಲಿಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ ಏನೇನೂ ನಡೆಯುತ್ತೆ ಅಂತ ಗಮನದಲ್ಲಿದೆ. ಆದರೆ ಟೇಬಲ್ ಮೇಲೆ ನಿಂತು ಡಾನ್ಸ್ ಮಾಡಿದ್ದು ನೋಡಿರಲಿಲ್ಲ. ಇಂತಹ ಘಟನೆಗಳು ಒಳ್ಳೆಯ ಲಕ್ಷಣಗಳಲ್ಲ, ಕಲಾಪದ ವೇಳೆ ಚರ್ಚೆಗೂ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸದನದಲ್ಲಿ ಚರ್ಚಿಸಲು ಹಲವಾರು ವಿಷಯಗಳಿವೆ. ಬೆಲೆ ಏರಿಕೆ, ರೈತರ ಸಮಸ್ಯೆ, ನೀರಾವರಿ ಸಮಸ್ಯೆ ಹೀಗೆ ಅನೇಕ ಗಂಭೀರ ವಿಚಾರಗಳಿವೆ. ಆದರೆ ಅಧಿವೇಶನದಲ್ಲಿ ಕಾಲ ವ್ಯರ್ಥವಾಗಿದೆ. ಮುಂದಿನ ಅಧಿವೇಶನ ಹೇಗೆ ಆರಂಭ ಮಾಡುತ್ತಾರೆ ಗೊತ್ತಿಲ್ಲ. ಆದರೆ ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಟ್ಟು ಹೋಗ್ತೀವಿ? ಮಹಾನುಭಾವರು ದೇಶಕ್ಕೆ ಸ್ವಾತಂತ್ರ್ಯ ತರಲು ಆತ್ಮಾರ್ಪಣೆ ಮಾಡಿದ್ದಾರೆ. ಈ ರೀತಿ ಅಧಿವೇಶನಗಳು ನಡೆದರೆ ಹೇಗೆ? ಮುಂದಿನ ಅಧಿವೇಶನ ಹೇಗೆ ನಡೆಯುತ್ತೆ ಎಂಬುದನ್ನು ನೋಡಿಕೊಂಡು ಅಲ್ಲಿ ಇರುವ ಬಗ್ಗೆ ತೀರ್ಮಾನಿಸುತ್ತೇನೆ. ಇಲ್ಲವಾದರೆ ನಮ್ಮ ಪಕ್ಷದ ಬಲವರ್ಧನೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...