alex Certify BIG NEWS: ಸಚಿವ ಸೋಮಶೇಖರ್ ಮಗನ ಬ್ಲ್ಯಾಕ್ ಮೇಲ್ ಪ್ರಕರಣ; ಕೇಸ್ ನಲ್ಲಿ ನನ್ನ ಪುತ್ರಿಯ ಪಾತ್ರ ಇಲ್ಲ; ರಾಜಕಾರಣಕ್ಕೆ ಕುಟುಂಬವನ್ನು ಎಳೆದು ತರಬೇಡಿ ಎಂದ ಇಂಡಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿವ ಸೋಮಶೇಖರ್ ಮಗನ ಬ್ಲ್ಯಾಕ್ ಮೇಲ್ ಪ್ರಕರಣ; ಕೇಸ್ ನಲ್ಲಿ ನನ್ನ ಪುತ್ರಿಯ ಪಾತ್ರ ಇಲ್ಲ; ರಾಜಕಾರಣಕ್ಕೆ ಕುಟುಂಬವನ್ನು ಎಳೆದು ತರಬೇಡಿ ಎಂದ ಇಂಡಿ ಶಾಸಕ

ಬೆಂಗಳೂರು: ಸಚಿವ ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ಗೆ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ನನ್ನ ಮಗಳ ಪಾತ್ರವಿಲ್ಲ, ಈ ಆರೋಪದ ಹಿಂದಿನ ಸತ್ಯಾಸತ್ಯತೆ ಬಯಲಾಗಬೇಕು ಎಂದು ವಿಜಯಪುರ ಜಿಲ್ಲೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್, ನನ್ನ ಮಗಳು ಎಂಎಸ್ ವಿದ್ಯಾಭ್ಯಾಸಕ್ಕಾಗಿ ಕಳೆದ ಮಾರ್ಚ್ ನಲ್ಲಿ ಯುಕೆಗೆ ಹೋಗಿದ್ದಾಳೆ. ಈ ಪ್ರಕರಣಕ್ಕೂ ನನ್ನ ಮಗಳಿಗೂ ಯಾವುದೇ ಸಂಬಂಧವಿಲ್ಲ. ಆಕೆಗೆ ನಿಶಾಂತ್ ಸೋಮಶೇಖರ್ ಪರಿಚಯವೂ ಇಲ್ಲ. ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ನನ್ನ ಮಗಳನ್ನು ಹಾಗೂ ನನ್ನ ಕುಟುಂಬವನ್ನು ಯಾಕೆ ಎಳೆದು ತರಲಾಗುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಇಂತಹ ಆರೋಪದಿಂದ ಬಹಳ ಬೇಸರವಾಗಿದೆ ಎಂದರು.

ರಾಜ್ಯ ಪೊಲೀಸ್ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಪ್ರಕರಣದ ಹಿನ್ನೆಲೆ ಏನು ? ನನ್ನ ಮಗಳನ್ನು, ನನ್ನ ಕುಟುಂಬವನ್ನು ಯಾಕೆ ಈ ಪ್ರಕರಣದಲ್ಲಿ ಎಳೆದು ತರುತ್ತಿದ್ದಾರೆ. ಇದರ ಹಿಂದಿರುವವವರು ಯಾರು ? ಎಂಬ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ನಿಜಾಂಶ ಏನು ಎಂಬುದು ಬಹಿರಂಗವಾಗಲಿ ಎಂದು ಆಗ್ರಹಿಸಿದರು.

ಸಚಿವ ಎಸ್.ಟಿ. ಸೋಮಶೇಖರ್ ಬಳಿಯೂ ನಾನು ಮಾತನಾಡಿದ್ದೇನೆ. ಅವರೂ ಕೂಡ ಪ್ರಕರಣದ ಹಿಂದಿನ ಷಡ್ಯಂತ್ರದ ಬಗ್ಗೆ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ. ಅವರು ನನ್ನ ಹಳೆ ಸ್ನೇಹಿತರು. ಯಾರೇ ಆಗಲಿ ರಾಜಕಾರಣ ಮಾಡುವುದಿದ್ದರೆ ನನ್ನ ಜತೆ ಮಾಡಲಿ, ರಾಜಕಾರಣ ಎಂದರೆ ನೇರಾನೇರ ಫೈಟ್ ಆಗಿರಬೇಕು ಹೊರತು ಯಾರೂ ಕೂಡ ಮಕ್ಕಳನ್ನು, ಕುಟುಂಬ ಸದಸ್ಯರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ನಾವು ಧಾರ್ಮಿಕವಾಗಿ ನಂಬಿಕೆಯಿರುವ ಕುಟುಂಬದವರು. ಸುಸಂಸ್ಕೃತರು, ಇಂತಹ ಬೆಳವಣಿಗೆಗೆ ಕೈಹಾಕುವವರೂ ಅಲ್ಲ. ಆರೋಪದಿಂದ ಮಾನಸಿಕವಾಗಿ ತುಂಬಾ ಬೇಸರವಾಗಿದೆ. ಮನೆಯವರೆಲ್ಲ ರಾಜಕಾರಣದಿಂದಾಗಿ ಇಂತಹ ಆರೋಪಗಳನ್ನು ಎದುರಿಸಬೇಕೆಂದರೆ ಅಂತಹ ರಾಜಕೀಯವೇ ಬೇಡ ರಾಜಕಾರಣವನ್ನೇ ಬಿಟ್ಟುಬಿಡಿ ಎಂದು ಹೇಳುತ್ತಿದ್ದಾರೆ. ಅದೇನೇ ಇರಲಿ ಈಗ ನಡೆದಿರುವ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...