alex Certify BIG NEWS; ಸಂಜನಾ ಗಲ್ರಾಣಿಗೆ ಅಶ್ಲೀಲ ಮೆಸೇಜ್; ಆಡಂ ಬಿದ್ದಪ್ಪ ಪೊಲೀಸ್ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ಸಂಜನಾ ಗಲ್ರಾಣಿಗೆ ಅಶ್ಲೀಲ ಮೆಸೇಜ್; ಆಡಂ ಬಿದ್ದಪ್ಪ ಪೊಲೀಸ್ ವಶಕ್ಕೆ

ಬೆಂಗಳೂರು: ನಟಿ ಸಂಜನಾ ಗಲ್ರಾಣಿ ಅವರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಡಂ ಬಿದ್ದಪ್ಪ, ಫೆ.25ರಂದು ರಾತ್ರಿ 10-12 ಗಂಟೆ ವೇಳೆ ನಟಿ ಸಂಜನಾ ಗಲ್ರಾಣಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಜನಾ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಲ್ಲದೇ ವಾಟ್ಸಪ್ ಮೆಸೇಜ್ ದಾಖಲೆಗಳನ್ನು ನೀಡಿದ್ದರು. ಅಶ್ಲೀಲ ಸಂದೇಶ ಹಾಗೂ ಅವಾಚ್ಯ ಪದ ಬಳಕೆ ಮಾಡುತ್ತಿರುವ ಆಡಂ ಬಿದ್ದಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಸಂಜನಾ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆಡಂ ಬಿದ್ದಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಆದರೆ ಆಡಂ ತನ್ನ ಮೊಬೈಲ್ ನ ವಾಟ್ಸಪ್ ಸಂದೇಶಗಳನ್ನು ಡಿಲಿಟ್ ಮಾಡಿರುವುದಲ್ಲದೇ, ತಾನು ಅಶ್ಲೀಲ ಸಂದೇಶ ಕಳುಹಿಸಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಂ ಹಾಗೂ ಆತನ ಮೊಬೈಲ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...