alex Certify BIG NEWS: ಶಾಸಕ ಜಮೀರ್ ಅಹ್ಮದ್ ಗೆ 3 ಕೋಟಿ ಸಾಲ ಕೊಟ್ಟಿದ್ದೆ; ವಿರೋಧಿಗಳಿಂದಾಗಿ ED ದಾಳಿ ನಡೆದಿದೆ ಎಂದ ಕೆಜಿಎಫ್ ಬಾಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಸಕ ಜಮೀರ್ ಅಹ್ಮದ್ ಗೆ 3 ಕೋಟಿ ಸಾಲ ಕೊಟ್ಟಿದ್ದೆ; ವಿರೋಧಿಗಳಿಂದಾಗಿ ED ದಾಳಿ ನಡೆದಿದೆ ಎಂದ ಕೆಜಿಎಫ್ ಬಾಬು

ಬೆಂಗಳೂರು: ನನ್ನ ವಿರೋಧಿಗಳು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ ನನ್ನ ಮೇಲೆ ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಜಿಎಫ್ ಬಾಬು, ಇಡಿ ದಾಳಿ ವೇಳೆ ಮನೆಯಲ್ಲಿ 8 ಲಕ್ಷದ 60 ಸಾವಿರ ರೂಪಾಯಿ ಹಣ, 1 ಕೋಟಿ 70 ಲಕ್ಷ ರೂ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ದಾಖಲೆ ಸಮೇತ ದೆಹಲಿ ಕಚೇರಿಗೆ ಬರುವಂತೆ ತಿಳಿಸಿದ್ದಾರೆ ಎಂದರು.

ಶಾಸಕ ಜಮೀರ್ ಅಹ್ಮದ್ ಮನೆ ಕಟ್ಟಲು 3 ಕೋಟಿ ರೂಪಾಯಿ ಸಾಲ ನೀಡಿದ್ದೆ. ಶಾಸಕರ ಮನೆ ಮೇಲೆ ಇಡಿ ದಾಳಿಯಾದಾಗ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದರು. ಈ ಬಗ್ಗೆ ವಿಚಾರಣೆ ವೇಳೆ ಹೇಳಿದ್ದೆ. 2013ರಲ್ಲಿ ಜಮೀರ್ ಗೆ ಸಾಲ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದೆ. ಹಣ ವಾಪಸ್ ಕೊಡಲು ಜಮೀರ್ ಸಮಯಾವಕಾಶ ಕೇಳಿದ್ದಾಗಿ ತಿಳಿಸಿದ್ದೆ. ಈ ಬಗ್ಗೆ ಆಗ ಇಡಿ ಅಧಿಕಾರಿಗಳು ನೋಟೀಸ್ ನೀಡಿದ್ದರು. ಈಗ ನನ್ನ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ವಿವರಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...