alex Certify BIG NEWS: ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ-ಯುವತಿ ಬಿದ್ದ ಪ್ರಕರಣ; ಗಾಯಗೊಂಡಿದ್ದ ಯುವತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ-ಯುವತಿ ಬಿದ್ದ ಪ್ರಕರಣ; ಗಾಯಗೊಂಡಿದ್ದ ಯುವತಿ ಸಾವು

ಬೆಂಗಳೂರು: ಸ್ನೇಹಿತನೊಂದಿಗೆ ಶಾಪಿಂಗ್ ಗೆ ಬಂದು ಸ್ಟೇರ್ಸ್ ಮೇಲಿನಿಂದ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ಬ್ರಿಗೇಡ್ ರಸ್ತೆಯ ಐದನೇ ಕ್ರಾಸ್ ನ ಅವೆನ್ಯೂ ಶಾಪಿಂಗ್ ಕಾಂಪ್ಲೆಕ್ಸ್ ಗೆ ಶಾಪಿಂಗ್ ಗೆ ಸ್ನೇಹಿತನ ಜತೆ ಬಂದಿದ್ದ ಯುವತಿ ಕಾಂಪ್ಲೆಕ್ಸ್ ನ ಸ್ಟೇರ್ಸ್ ನಿಂದ ಕಾಲು ಜಾರಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ತೀವ್ರ ರಕ್ತಸ್ರಾವದಿಂದಾಗಿ ಯುವತಿ ಕೊನೆಯುಸಿರೆಳೆದಿದ್ದಾಳೆ. ಯುವತಿಯನ್ನು ರಕ್ಷಿಸಲು ಹೋಗಿ ಆಕೆಯ ಸ್ನೇಹಿತ ಕೂಡ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.

BIG NEWS: ಬೆಂಗಳೂರು ಡಿಸಿ ಕಚೇರಿ ಮೇಲೆ ACB ದಾಳಿ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮ್ಯಾನೇಜರ್

ಮೃತ ಯುವತಿ ಆಂಧ್ರ ಮೂಲದ ಲಿಯಾ ಎಂದು ಗುರುತಿಸಲಾಗಿದೆ. ಗಾಯಾಳು ಯುವಕ ಬೆಂಗಳೂರಿನ ಕ್ರಿಸ್ ಎಂದು ತಿಳಿದುಬಂದಿದೆ. ಇಬ್ಬರೂ ನಗರದ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದರು.

ಆರಂಭದಲ್ಲಿ ಯುವಕ-ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿತ್ತು. ಆದರೆ ಪೊಲೀಸರ ಮಾಹಿತಿ ಪ್ರಕಾರ ಇದು ಮೇಲ್ನೋಟಕ್ಕೆ ಆತ್ಮಹತ್ಯೆಯ ಯತ್ನದಂತೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಗಾಯಾಳು ಕ್ರಿಸ್ ಹೇಳುವ ಪ್ರಕಾರ ಲಿಯಾ ಹಾಗೂ ನಾನು ಲವರ್ಸ್ ಅಲ್ಲ, ಸ್ನೇಹಿತರಷ್ಟೇ. ನಾವೆಲ್ಲರೂ ಶಾಪಿಂಗ್ ಗಾಗಿ ತೆರಳಿದ್ದೆವು ಕಾಂಪ್ಲೆಕ್ಸ್ ನ ಎರಡನೇ ಫ್ಲೋರ್ ಸ್ಟೇರ್ ನಿಂದ ಲಿಯಾ ಕಾಲು ಜಾರಿ ಬಿದ್ದಿದ್ದಾಳೆ ಎಂದು ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...