ಬೆಂಗಳೂರು: ಹೆಡ್ ಬುಷ್ ಚಿತ್ರದ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧನಂಜಯ್, ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧನಂಜಯ್, ಹೆಡ್ ಬುಷ್ ಚಿತ್ರದಲ್ಲಿ ಯಾರಿಗೂ ಅವಮಾನ ಮಾಡಿಲ್ಲ, ಅನಗತ್ಯವಾಗಿ ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ನನಗೆ ವಿಷಾದವಿದೆ. ವೀರಗಾಸೆ ಕಲಾವಿದರಿಗೆ ನಾವು ಯಾವ ಅವಮಾನವನ್ನೂ ಮಾಡಿಲ್ಲ. ಸಿನಿಮಾದಲ್ಲಿರುವ ಶೂ ಧರಿಸಿ ವೀರಗಾಸೆ ಕಲಾವಿದರ ವೇಷ ಧರಿಸಿದ ದೃಶ್ಯ, ಕಾಲಿನಿಂದ ಒದೆಯುವ ದೃಶ್ಯ ತೆಗೆಯುವಂತೆ ಮನವಿ ಬಂದಿದೆ. ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಇನ್ನು ವೀರಗಾಸೆ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಕ್ಷಮೆಯಾಚಿಸಿದ ನಟ ಧನಂಜಯ್, ವೀರಗಾಸೆ ಕಲಾವಿದರಿಗೂ ಮಾಸಾಶನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.