
ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದು , AN225 ‘ಮ್ರಿಯಾ’ (ಉಕ್ರೇನಿಯನ್ ಭಾಷೆಯಲ್ಲಿ ಕನಸು ಎಂದರ್ಥ), ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ಆಗಿತ್ತು. ರಷ್ಯಾ ನಮ್ಮ ಮ್ರಿಯಾವನ್ನು ನಾಶ ಮಾಡಿರಬಹುದು. ಆದರೆ ಬಲವಾದ , ಮುಕ್ತ ಹಾಗೂ ಪ್ರಜಾಪ್ರಭುತ್ವದ ಯುರೋಪಿಯನ್ ರಾಜ್ಯದ ನಮ್ಮ ಕನಸನ್ನು ನಾಶ ಮಾಡಲು ರಷ್ಯಾದಿಂದ ಎಂದಿಗೂ ಸಾಧ್ಯವಿಲ್ಲ, ನಾವು ಮೇಲುಗೈ ಸಾಧಿಸುತ್ತೇವೆ ಎಂದು ಬರೆದಿದ್ದಾರೆ.
AN225 ವಿಮಾನವನ್ನು ನಿರ್ಮಿಸಿದ ಮತ್ತು ನಿರ್ವಹಿಸುವ ಕಂಪನಿ ಆಂಟೊನೊವ್, AN-225 ಅನ್ನು ತಜ್ಞರು ಪರಿಶೀಲಿಸುವವರೆಗೆ, ಅವರು ವಿಮಾನದ ತಾಂತ್ರಿಕ ಸ್ಥಿತಿಯ ಬಗ್ಗೆ ವರದಿ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದೆ.