alex Certify BIG NEWS: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಯಲ್ಲಿ 6 ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ; ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಯಲ್ಲಿ 6 ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ; ಇಲ್ಲಿದೆ ಮಾಹಿತಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಮಣಿಸುವ ನಿಟ್ಟಿನಲ್ಲಿ ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಬೆಂಗಳೂರಿನಲ್ಲಿ ಇಂದಿನಿಂದ 2 ದಿನಗಳ ಕಲ ಮಹಾ ಮೈತ್ರಿಕೂಟ ನಾಯಕರ ಸಭೆ ನಡೆಯಲಿದೆ.

ಇಂದು ಹಾಗೂ ನಾಳೆ ಸಭೆ ನಡೆಯಲಿದ್ದು, ಸಭೆಯಲ್ಲಿ ಪ್ರಮುಖವಾಗಿ 6 ವಿಚಾರಗಳು ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

* ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲು ಉಪಸಮಿತಿ ರಚನೆ ಬಗ್ಗೆ ಚರ್ಚೆಯಾಗಲಿದೆ. ಇದು ಮೈತ್ರಿಕೂಟ ಬೆಳವಣಿಗೆ ನಿಟ್ಟಿನಲ್ಲಿ ಸಂವಹನ ನಡೆಸಿ ಲೋಕಸಭಾ ಚುನಾವಣೆಗೆ ಸೇತುವೆಯಂತೆ ಕೆಲಸ ಮಾಡಲಿದೆ.

* ಮೈತ್ರಿಕೂಟ ಜಂಟಿ ಕಾರ್ಯಕ್ರಮಗಳ ಆಯೋಜನೆ ಉಪಸಮಿತಿ ರಚನೆ – ದೇಶದಲ್ಲಿ ಎಲ್ಲಿ ರ್ಯಾಲಿ, ಸಭೆಗಳನ್ನು ಆಯೋಜಿಸಬೇಕು, ಕೇಂದ್ರದ ವಿರುದ್ಧ ಯಾವ ರೀತಿ ಜನಾಂದೋಲನ ನಡೆಸಬೇಕು ಎಂಬ ಬಗ್ಗೆ ಜವಾಬ್ದಾರಿ ವಹಿಸಲು ಈ ಸಮಿತಿಗೆ ನೀಡಲಾಗುವುದು.

* ವಿಪಕ್ಷಗಳ ಒಕ್ಕೂಟ ನಡುವೆ ಸೀಟು ಹಂಚಿಕೆಗಳ ಬಗ್ಗೆ ಗಂಭೀರ ಚರ್ಚೆ – ಯಾವ ರಾಜ್ಯದಲ್ಲಿ ಯಾವ ಪಕ್ಷ ಪ್ರಭಲವಾಗಿದೆ ಆ ಪಕ್ಷಕ್ಕೆ ಹೆಚ್ಚಿನ ಮನ್ನಣೆ

* ಇವಿಎಂ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ

* ವಿಪಕ್ಷಗಳ ಮೈತ್ರಿ ಕೂಟಕ್ಕೆ ಇಡಬೇಕಾದ ಹೆಸರಿನ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ

* ಮೈತ್ರಿಕೂಟ ಮುನ್ನಡೆಸಲು ಸಂಚಾಲಕರ ನೇಮಕ ಮಾಡುವ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...