ಬೆಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಬಳಿ ನಡೆದಿದೆ.
47 ವರ್ಷದ ಮಹೇಶ್ ಮೃತ ದುರ್ದೈವಿ. ಆನೇಕಲ್ ನ ದೊಮ್ಮಸಂದ್ರ ಗ್ರಾಮದ ಸಂತೆ ಬೀದಿಯ ಕಾವೇರಮ್ಮ ದೇಗುಲದ ಬಳಿ ಈ ದುರಂತ ಸಂಭವಿಸಿದೆ.
ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದು, ಇದನ್ನು ಗಮನಿಸದೇ ಹೋದ ವ್ಯಕ್ತಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಬೆಸ್ಕಾಂ ನಿರ್ಲಕ್ಷದಿಂದಾಗಿ ದುರಂತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.