alex Certify BIG NEWS: ವಿದೇಶಿ ಲೀಗ್‌ಗಳಲ್ಲಿ ಆಡಲು ಭಾರತೀಯರಿಗಿಲ್ಲ ಅವಕಾಶ; ಮುಂದಿನ ಐಪಿಎಲ್‌ಗೆ ಬಿಸಿಸಿಐ ಭರ್ಜರಿ ತಯಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದೇಶಿ ಲೀಗ್‌ಗಳಲ್ಲಿ ಆಡಲು ಭಾರತೀಯರಿಗಿಲ್ಲ ಅವಕಾಶ; ಮುಂದಿನ ಐಪಿಎಲ್‌ಗೆ ಬಿಸಿಸಿಐ ಭರ್ಜರಿ ತಯಾರಿ

ಮುಂದಿನ ಐದು ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ ಅಂತಾ ಹೊಸ ಅಧ್ಯಕ್ಷ ಅರುಣ್ ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ. 2023-2027ರವರೆಗಿನ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಪ್ರತಿ ಪಂದ್ಯದ ಮೌಲ್ಯದ ದೃಷ್ಟಿಯಿಂದ ನೋಡಿದ್ರೆ ಇದು ವಿಶ್ವದ ಎರಡನೇ ಅತ್ಯಮೂಲ್ಯ ಕ್ರೀಡಾ ಲೀಗ್ ಎನಿಸಿಕೊಂಡಿದೆ.

ಈ ಬಾರಿ ಎರಡೂವರೆ ತಿಂಗಳ ಅವಧಿಯಲ್ಲಿ 10 ತಂಡಗಳ ನಡುವೆ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ.  ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಐಪಿಎಲ್‌ ವಿಶ್ವದ ಅತಿ ದೊಡ್ಡ ಲೀಗ್‌ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ. ಇದಕ್ಕೆ ಬೇಕಾದ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

ಐಪಿಎಲ್‌ ಅತಿ ಹೆಚ್ಚು ಅಭಿಮಾನಿ ಸ್ನೇಹಿ, ಟಿವಿಯಲ್ಲಿ ವೀಕ್ಷಿಸುವವರಿಗೆ ಮತ್ತು ಕ್ರೀಡಾಂಗಣಕ್ಕೆ ಬಂದು ನೋಡುವವರಿಗೆ ಉತ್ತಮ ಅನುಭವವನ್ನು ನೀಡಲು ಬಯಸುತ್ತೇವೆ ಎಂದಿದ್ದಾರೆ ಅರುಣ್‌, ಐಪಿಎಲ್ ವೇಳಾಪಟ್ಟಿಯನ್ನು ಸಾಕಷ್ಟು ಮುಂಚಿತವಾಗಿ ಸಿದ್ಧಪಡಿಸಿದರೆ, ಪ್ರಪಂಚದಾದ್ಯಂತದ ಅಭಿಮಾನಿಗಳು ಅದಕ್ಕೆ ಅನುಗುಣವಾಗಿ ಪ್ರವಾಸ ಮಾಡಬಹುದು ಅನ್ನೋದು ಅವರ ಲೆಕ್ಕಾಚಾರ. ಐಪಿಎಲ್‌ಗೆ ಎರಡು ಹೊಸ ತಂಡಗಳನ್ನು ಸೇರಿಸುವ ಮೂಲಕ ಬಿಸಿಸಿಐ 12,000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಗಾಗಿ ತಂಡಗಳ ಸಂಖ್ಯೆ ಹತ್ತೇ ಇರಲಿದೆ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ.

ಮೊದಲ ಎರಡು ಸೀಸನ್‌ಗಳಲ್ಲಿ 74 ಪಂದ್ಯಗಳನ್ನು ಮತ್ತು ನಂತರ 84 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪ್ಲಾನ್‌ ಮಾಡಿದೆ. ಐದನೇ ವರ್ಷದಲ್ಲಿ 94 ಪಂದ್ಯಗಳನ್ನು ಆಯೋಜಿಸುವ ಲೆಕ್ಕಾಚಾರದಲ್ಲಿದೆ.  ಫುಟ್ಬಾಲ್‌ ಅಥವಾ ವಿಶ್ವದ ಇತರ ಕ್ರೀಡಾ ಲೀಗ್‌ಗಳೊಂದಿಗೆ ಐಪಿಎಲ್‌ ಅನ್ನು ಹೋಲಿಸಲು ಸಾಧ್ಯವಿಲ್ಲ, ಏಕೆಂದರೆ ಕ್ರಿಕೆಟ್‌ನ ಅವಶ್ಯಕತೆಗಳು ಸಂಪೂರ್ಣವಾಗಿ ವಿಭಿನ್ನ ಅನ್ನೋದು ಅರುಣ್‌ ಧುಮಾಲ್‌ ಅವರ ಸಮರ್ಥನೆ. ವಿಶ್ವದಾದ್ಯಂತ ಟಿ20 ಲೀಗ್‌ಗಳು ಆರಂಭವಾಗುತ್ತಿವೆ. ವಿದೇಶಿ ಲೀಗ್‌ಗಳಲ್ಲಿ ಭಾರತೀಯರೂ ಆಡಲಿ ಅನ್ನೋದು ವಿವಿಧ ದೇಶಗಳ ಬಯಕೆ.

ದಕ್ಷಿಣ ಆಫ್ರಿಕಾದ ಹೊಸ ಲೀಗ್‌ನ ಎಲ್ಲಾ ಆರು ತಂಡಗಳನ್ನು ಐಪಿಎಲ್ ಮಾಲೀಕರು ಖರೀದಿಸಿದ್ದಾರೆ. ಹಾಗಾಗಿ ಈ ತಂಡಗಳಲ್ಲಿ ಭಾರತೀಯ ಆಟಗಾರರ ಉಪಸ್ಥಿತಿಯನ್ನು ಅವರು ಬಯಸುವುದು ಸಹಜ. ಆದರೆ ಭಾರತದ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡುವ ಉದ್ದೇಶ ಬಿಸಿಸಿಐಗೆ ಇಲ್ಲ ಎಂದು ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಗುತ್ತಿಗೆ ಹೊಂದಿರುವ ಆಟಗಾರರು ಇತರ ಲೀಗ್‌ಗಳಲ್ಲಿ ಆಡುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...