alex Certify BIG NEWS: ವಾಹನ ನೋಂದಣಿಗಾಗಿ ಬಿಎಚ್​​ (ಭಾರತ್​) ಸರಣಿಯನ್ನು ಆರಂಭಿಸಿದ ಕರ್ನಾಟಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಹನ ನೋಂದಣಿಗಾಗಿ ಬಿಎಚ್​​ (ಭಾರತ್​) ಸರಣಿಯನ್ನು ಆರಂಭಿಸಿದ ಕರ್ನಾಟಕ

ರಾಜ್ಯದ ಸರ್ಕಾರಿ ನೌಕರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸುಗಮವಾಗಿ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ವಾಹನ ಮಾಲೀಕರ ಆಯ್ದ ಗುಂಪಿಗೆ ಬಿಹೆಚ್​ ಸರಣಿಯ ನೋಂದಣಿ ಸಂಖ್ಯೆಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಎರಡು ದಿನಗಳ ಹಿಂದೆ ಇಲಾಖೆಯು ಬಿಹೆಚ್​ ಸರಣಿಯ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಆರಂಭಿಸಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ. ಪುರುಷೋತ್ತಮ್​ ಮಾಹಿತಿ ನೀಡಿದ್ದಾರೆ.

ನಿಯಮಗಳ ಪ್ರಕಾರ ಬಿಹೆಚ್​ ಸರಣಿಗಳನ್ನು ಬಯಸುವವರು ಕೇಂದ್ರ ಸರ್ಕಾರ ಅಥವಾ ಪಿಎಸ್​ಯು ಉದ್ಯೋಗಿಗಳು ಅಥವಾ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಗಳು ಮತ್ತು ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರುವರಿಗೆ ಈ ಬಿಹೆಚ್​ ಸರಣಿ ಸಿಗಲಿದೆ ಎಂದು ಪುರುಷೋತ್ತಮ್​ ಹೇಳಿದ್ದಾರೆ.

ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ಬರುವ ವಾಹನಗಳು ರಾಜ್ಯಕ್ಕೆ ಪ್ರವೇಶಿಸಿದ ದಿನಾಂಕದಿಂದ 15 ದಿನಗಳಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಮುಂದಿನ 12 ತಿಂಗಳುಗಳ ಒಳಗಾಗಿ ಸ್ಥಳೀಯ ಆರ್​ಟಿಓದಲ್ಲಿ ನೋಂದಣಿ ಮಾಡಬೇಕು. ಶುಲ್ಕ ಪಾವತಿಯ ಮೂಲಕ ಪ್ರಕ್ರಿಯೆ ನಡೆಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...