ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶವನ್ನು ಈಗ ಕೂಡ ಮಾಡಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಾಟ್ಸಾಪ್ ಈ ಕುರಿತು ಸಂದೇಶ ಹಾಕಿದ್ದು ಕಳುಹಿಸಿದ ಸಂದೇಶದ ಕುರಿತು ಯೋಚನೆ ಮಾಡುತ್ತಿದ್ದೀರಾ ? ಹಾಗಾದರೆ ನಿಮಗೆ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದೆ.
ಈ ಮೊದಲು ಯಾವುದಾದರು ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಅದನ್ನು ಡಿಲೀಟ್ ಮಾಡಲು ಒಂದು ಗಂಟೆ ಎಂಟು ನಿಮಿಷ ಹದಿನಾರು ಸೆಕೆಂಡ್ಗಳ ಕಾಲ ಮಾತ್ರ ಅವಕಾಶವಿತ್ತು. ಇನ್ನು ಮುಂದೆ ಸಂದೇಶ ಕಳುಹಿಸಿದ ಬಳಿಕ ಎರಡು ದಿನಗಳ ಕಾಲ ಅದನ್ನು ಡಿಲೀಟ್ ಮಾಡುವ ಅವಕಾಶ ಲಭ್ಯವಾಗಲಿದೆ.