alex Certify BIG NEWS: ವರುಣಾರ್ಭಟಕ್ಕೆ ಬೆಳಗಾವಿಯ 16 ಸೇತುವೆಗಳು ಮುಳುಗಡೆ; ಪ್ರವಾಹ ಭೀತಿಯಲ್ಲಿ ಜನರು; ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕವೂ ಕಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರುಣಾರ್ಭಟಕ್ಕೆ ಬೆಳಗಾವಿಯ 16 ಸೇತುವೆಗಳು ಮುಳುಗಡೆ; ಪ್ರವಾಹ ಭೀತಿಯಲ್ಲಿ ಜನರು; ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕವೂ ಕಡಿತ

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲಿ ಬೆಳಗಾವಿ ಜಿಲ್ಲೆಯಲ್ಲಿನ 7 ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.

ದೂಧ್ ಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಹಲಾತ್ರಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ 16 ಸೇತುವೆಗಳು ಮುಳುಗಡೆಯಾಗಿವೆ. ಹಲವು ಪ್ರದೇಶಗಳಿಗೆ ಸಂಪರ್ಕವೇ ಕಡಿತಗೊಂಡಿದೆ.

ಭೋಜ್-ಕರಾಅದಗ, ಭೋಜವಾಡಿ ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರ್ವಾದ-ಕುನ್ನೂರು, ಸಿದ್ನಾಳ್-ಅಕ್ಕೋಳ್, ಭೋಜ್-ಕುನ್ನೂರು, ಭೀವಶಿ-ಜತ್ರಾಟ್, ಮಂಜರಿ-ಸೌಂದತ್ತಿಮಂಗವತ್ತಿ-ರಾಜಾಪುರ, ಕುರ್ಣಿ-ಕೊಚಾರಿ, ಖಾನಾಪುರ-ಹೆಮ್ಮಡಗಾ, ಅರ್ಜುನವಾಡಿ-ಕುರ್ಣಿ ಸೇರಿದಂತೆ 16 ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಪೊಲೀರು ಬ್ಯಾರಿಕೇಡ್ ಗಳನ್ನು ಅಳವಡಿಸಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಬೆಳಗಾವಿಯಲ್ಲಿ 7 ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹಭೀತಿ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...