ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲಿ ಬೆಳಗಾವಿ ಜಿಲ್ಲೆಯಲ್ಲಿನ 7 ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.
ದೂಧ್ ಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಹಲಾತ್ರಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ 16 ಸೇತುವೆಗಳು ಮುಳುಗಡೆಯಾಗಿವೆ. ಹಲವು ಪ್ರದೇಶಗಳಿಗೆ ಸಂಪರ್ಕವೇ ಕಡಿತಗೊಂಡಿದೆ.
ಭೋಜ್-ಕರಾಅದಗ, ಭೋಜವಾಡಿ ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರ್ವಾದ-ಕುನ್ನೂರು, ಸಿದ್ನಾಳ್-ಅಕ್ಕೋಳ್, ಭೋಜ್-ಕುನ್ನೂರು, ಭೀವಶಿ-ಜತ್ರಾಟ್, ಮಂಜರಿ-ಸೌಂದತ್ತಿಮಂಗವತ್ತಿ-ರಾಜಾಪುರ, ಕುರ್ಣಿ-ಕೊಚಾರಿ, ಖಾನಾಪುರ-ಹೆಮ್ಮಡಗಾ, ಅರ್ಜುನವಾಡಿ-ಕುರ್ಣಿ ಸೇರಿದಂತೆ 16 ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಪೊಲೀರು ಬ್ಯಾರಿಕೇಡ್ ಗಳನ್ನು ಅಳವಡಿಸಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಬೆಳಗಾವಿಯಲ್ಲಿ 7 ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹಭೀತಿ ಎದುರಾಗಿದೆ.