ಬೆಂಗಳೂರು: ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಯುವರಾಜ್ ಸ್ವಾಮಿ ವಿರುದ್ಧ 9 ಸಾಕ್ಷಿಗಳ ಸಮೇತ ಸಿಟಿ ಸಿವಿಲ್ ಕೋರ್ಟ್ ಗೆ 350 ಪುಟಗಳ ಪ್ರಾಥಮಿಕ ಹಂತದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಯುವರಾಜ್ ಸ್ವಾಮಿ ವಿರುದ್ಧ ಸೆಕ್ಷನ್ 420, 504, 506 ಅಡಿ ಚಾರ್ಜ್ ಶೀಟ್ ದಾಖಲಾಗಿದೆ.
BIG NEWS: ʼಸುಲಭ ಶೌಚಾಲಯʼಕ್ಕೆ ಮೋದಿ ಹೆಸರಿಡಲಿ; ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ
ಉದ್ಯಮಿ ಸುದೀಂದ್ರ ರೆಡ್ಡಿ ಅವರಿಗೆ 1 ಕೋಟಿ ರೂ. ವಂಚನೆ ಮಾಡಿದ್ದ ಯುವರಾಜ್ ಸ್ವಾಮಿ, ತನ್ನ ಬಳಿ ಕೆಲಸ ಮಾಡುತ್ತಿದ್ದ ಚಾಲಕನಿಗೂ ವಂಚಿಸಿದ್ದ. ರಾಜಾಜಿನಗರ ನಿವಾಸಿ ಜಿ.ನರಸಿಂಹ ಮೂರ್ತಿಗೆ ಎಇಇ ಹುದ್ದೆ ಕೊಡಿಸುವುದಾಗಿ ಹೇಳಿ ಹಣ ಪಡೆದು ಲಕ್ಷಾಂತರ ರೂ.ವಂಚಿಸಿದ್ದ. ಈತನಿಂದ ವಂಚನೆಗೊಳಗಾದವರು ಹಣ ವಾಪಸ್ ಕೇಳಿದಾಗ ಕೊಲೆ ಬೆದರಿಕೆಯೊಡ್ಡುತ್ತಿದ್ದ. ವಂಚನೆ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಸ್ವತಃ ಯುವರಾಜ್ ಸ್ವಾಮಿ ತಪ್ಪೊಪ್ಪಿಕೊಂಡಿದ್ದು, ಕೆಲ ದಾಖಲೆಗಳನ್ನು ಸೀಜ್ ಮಾಡಿರುವ ಸಿಸಿಬಿ ಪೊಲೀಸರು ಇದೀಗ ವಂಚಕನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.