ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿದ್ದ ಕಡತಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮೂರು ಕಬೋರ್ಡ್ ಗಳಿದ್ದ ಕಡತಗಳು, ಮೂರು ಕಂಪ್ಯೂಟರ್ ಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ರಜೆ ಇದ್ದ ಕಾರಣ ಕಚೇರಿಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಕಳ್ಳರು ಕಚೇರಿಗೆ ನುಗ್ಗಿ ಕಡತ, ಕಂಪ್ಯೂಟರ್ ಗಳನ್ನು ಕದ್ದೊಯ್ದಿದ್ದಾರೆ.
ಇತ್ತೀಚೆಗೆ PWD ಕಚೇರಿಯಲ್ಲಿ ಹೊಸ ಕಂಪ್ಯೂಟರ್ ಅಳವಡಿಸಲಾಗಿತ್ತು. ಇದೀಗ ಆ ಕಂಪ್ಯೂಟರ್ ನ್ನೇ ಹೊತ್ತೊಯ್ದಿದ್ದಾರೆ. ಸಹಾಯಕ ಕಾರ್ಯಪಾಲಕ ಅನಂತ್ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.