ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಅಂತಿಮ ಘಟ್ಟ ತಲುಪಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ.
ಕೇಂದ್ರದ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ಟೌನ್ ಹಾಲ್ ಮುಂದೆ ಜಮಾವಣೆಗೊಂಡ ವಿವಿಧ ರೈತ ಸಂಘಟಟನೆ ಕಾರ್ಯಕರ್ತರು, ಕರವೇ, ಕನ್ನಡಪರ ಸಂಘಟನೆ, ಮಹಿಳಾ ಸಂಘಟನೆ ಕಾರ್ಯಕರ್ತರು ಬೃಹತ್ ಕಾಲ್ನಡಿಗೆ ಜಾಥಾ ಆರಂಭಿಸಿದ್ದಾರೆ. ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ.
ಅಫ್ಘಾನಿಸ್ತಾನ ಸಚಿವಾಲಯಗಳ ನೀಲಿ ಬ್ಯಾಡ್ಜ್ ಅಳಿಸಿ ಹಾಕಿದ ಟ್ವಿಟರ್ ಸಂಸ್ಥೆ..!
ಜಾಥಾದಲ್ಲಿ ಪಾಲ್ಗೊಂಡಿರುವ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಡಿಸಿದ್ದಾರೆ. ಇನ್ನೊಂದೆಡೆ ಟೌನ್ ಹಾಲ್ ನಿಂದ ಹೊರಟ ಇನ್ನೊಂದು ರೈತ ಸಂಘಟನೆ ಕಾರ್ಯಕರ್ತರು ಕಂದಾಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆದಿದ್ದಾರೆ.