alex Certify BIG NEWS: ‘ರೇಪ್ ನಡೆದಿದ್ದು ಅಲ್ಲಿ, ಆದ್ರೆ ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ’; ಗೃಹ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ರೇಪ್ ನಡೆದಿದ್ದು ಅಲ್ಲಿ, ಆದ್ರೆ ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ’; ಗೃಹ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ

ಬೆಂಗಳೂರು: ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ರೇಪ್ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಅತ್ಯಾಚಾರ ನಡೆದಿರುವುದು ಮೈಸೂರಿನಲ್ಲಿ, ಇಲ್ಲಿ ಕಾಂಗ್ರೆಸ್ ನವರು ಗೃಹ ಸಚಿವರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಸಂಜೆ 7:30ಕ್ಕೆ ಆ ಯುವಕ, ಯುವತಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಅತ್ಯಾಚಾರ ಆರೋಪಿಗಳ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿದೆ ಎಂದರು.

BIG NEWS: ಕೊರೊನಾ ವೇಳೆ ಇಎಂಐ ವಹಿವಾಟಿನಲ್ಲಿ ಶೇ.220ರಷ್ಟು ಹೆಚ್ಚಳ

ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದು ಎರಡು ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಇದು ಗೃಹ ಇಲಾಖೆ ಕಾರ್ಯಕ್ಷಮತೆ ಕುಸಿದಿದೆ ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುತಿದ್ದಾರೆ. ರೇಪ್ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆ ಎಂದು ಬಾಲಿಷವಾಗಿ ಮಾತನಾಡಿದ್ದಾರೆ. ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಕಾಂಗ್ರೆಸ್ ಕೆಂಡಕಾರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...