alex Certify BIG NEWS: ರಿಯಾಯಿತಿ ದರದಲ್ಲಿ ನೀಡುವ ಕೃಷಿ ಪರಿಕರಗಳಿಗೆ ಬಾರ್ ಕೋಡಿಂಗ್; 2023ರ ಏಪ್ರಿಲ್ 1ರಿಂದ ಜಾರಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಿಯಾಯಿತಿ ದರದಲ್ಲಿ ನೀಡುವ ಕೃಷಿ ಪರಿಕರಗಳಿಗೆ ಬಾರ್ ಕೋಡಿಂಗ್; 2023ರ ಏಪ್ರಿಲ್ 1ರಿಂದ ಜಾರಿಗೆ

ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯಿಂದ ಕೊಡಲಾಗುವ ಎಲ್ಲ ಕೃಷಿ ಪರಿಕರಗಳಿಗೆ ಬಾರ್ ಕೋಡಿಂಗ್ ಅಳವಡಿಸಲು ಸಿದ್ಧತೆ ನಡೆಸಲಾಗಿದೆ. 2023ರ ಏಪ್ರಿಲ್ 1ರಿಂದಲೇ ಇದು ಜಾರಿಗೆ ಬರಲಿದೆ.

ಮಂಡಿ ನೋವಿನ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಅಲ್ಲಿಂದಲೇ ವರ್ಚುವಲ್ ಸಭೆ ನಡೆಸಿ ಕೃಷಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.

ಜೊತೆಗೆ ಏಪ್ರಿಲ್ 1ರಿಂದ ಕೃಷಿ ಇಲಾಖೆಯ ಎಲ್ಲಾ ಕಚೇರಿಗಳು ಕಾಗದರಹಿತ ಆಡಳಿತ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಸಚಿವರು ಸೂಚಿಸಿದ್ದು, ಅಲ್ಲದೆ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಎಲ್ಲ ಕಾಮಗಾರಿಗಳ ಛಾಯಾಚಿತ್ರ ಸೇರಿದಂತೆ ಇತರ ವಿವರಗಳನ್ನು ರೈತ ಮಿತ್ರ ವೆಬ್ ಸೈಟ್ ಗೆ ಗೆ ಅಪ್ಲೋಡ್ ಮಾಡಬೇಕು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...