alex Certify BIG NEWS: ರಿಫ್ಲೆಕ್ಟಿವ್​ ಟೇಪ್​ ಅಳವಡಿಸದ ವಾಹನಗಳಿಗೆ ಈ ನಗರದಲ್ಲಿ ವಿಧಿಸಲಾಗುತ್ತೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಿಫ್ಲೆಕ್ಟಿವ್​ ಟೇಪ್​ ಅಳವಡಿಸದ ವಾಹನಗಳಿಗೆ ಈ ನಗರದಲ್ಲಿ ವಿಧಿಸಲಾಗುತ್ತೆ ದಂಡ

ಪ್ರತಿಕೂಲ ಹವಾಮಾನದಿಂದಾಗಿ ಗೋಚರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾ ಪೊಲೀಸರು ತಮ್ಮ ವಾಹನಗಳ ಮೇಲೆ ರಿಫ್ಲೆಕ್ಟಿವ್​ ಟೇಪ್​ಗಳನ್ನು ಅಂಟಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಉಂಟಾಗಬಲ್ಲ ರಸ್ತೆ ಅಪಘಾತಗಳನ್ನು ತಡೆಯಲು ಇದೊಂದು ಅತ್ಯವಶ್ಯಕ ಕ್ರಮವಾಗಿದೆ. ವಾಹನಗಳು ಮಾತ್ರವಲ್ಲದೇ ಪೊಲೀಸರು ಬ್ಯಾರಿಕೇಡ್​ಗಳು ಹಾಗೂ ವಿವಿಧ ಕಂಬಗಳಲ್ಲಿ ಇಂತಹ ಟೇಪ್​ಗಳನ್ನು ಅಂಟಿಸಿದ್ದಾರೆ.

ಇದೀಗ ಇದೇ ದಿಶೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಟ್ರಾಫಿಕ್​ ಪೊಲೀಸರು ವಾಹನಗಳ ಮೇಲೆ ರಿಫ್ಲೆಕ್ಟಿವ್​ ಟೇಪ್​ಗಳನ್ನು ಕಡ್ಡಾಯಗೊಳಿಸಿದ್ದಾರೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿಎನ್​​​ಡಿ ಫ್ಲೈ ಬೇ ಟೋಲ್​ ಪ್ಲಾಜಾದಲ್ಲಿ ರಿಫ್ಲೆಕ್ಟಿವ್​​ ಟೇಪ್​ಗಳನ್ನು ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ರಿಫ್ಲೆಕ್ಟಿವ್​ ಟೇಪ್​ಗಳು ಪ್ರತಿಫಲನ ಗುಣ ಹೊಂದಿರುವ ಹಿನ್ನೆಲೆಯಲ್ಲಿ ಚಾಲಕರಿಗೆ ಮುಂಬದಿಯಲ್ಲಿ ವಾಹನ ಬರುತ್ತಿದೆ ಎಂಬ ಸಂದೇಶ ಸಿಗುತ್ತದೆ. ಅದರಲ್ಲೂ ಟ್ರಕ್​ ಹಾಗೂ ಟ್ರ್ಯಾಕ್ಟರ್​ನಂತಹ ವಾಹನಗಳಿಗಂತೂ ರಿಫ್ಲೆಕ್ಟಿವ್​ ಟೇಪ್​ಗಳು ಅತ್ಯವಶ್ಯಕವಾಗಿದೆ.

ಈ ನಿಯಮವು ಸರಿಯಾಗಿ ಅನುಷ್ಠಾನಕ್ಕೆ ಬಂದ ಬಳಿಕ ರಿಫ್ಲೆಕ್ಟಿವ್​ ಟೇಪ್​ಗಳನ್ನು ಅಳವಡಿಸದ ಜನರಿಗೆ 1000 ರೂಪಾಯಿ ದಂಡ ವಿಧಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...