alex Certify BIG NEWS: ರಾಜ್ಯದ ಜನತೆಗೆ ಪೆಟ್ರೋಲ್ ಶಾಕ್; ಹಲವು ಜಿಲ್ಲೆಗಳಲ್ಲಿ 100 ರೂ ಗಡಿ ದಾಟಿದ ಪೆಟ್ರೋಲ್ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದ ಜನತೆಗೆ ಪೆಟ್ರೋಲ್ ಶಾಕ್; ಹಲವು ಜಿಲ್ಲೆಗಳಲ್ಲಿ 100 ರೂ ಗಡಿ ದಾಟಿದ ಪೆಟ್ರೋಲ್ ದರ

ಬೆಂಗಳೂರು: ಕೊರೊನಾದಿಂದ ತತ್ತರಿಸಿರುವ ಜನತೆಗೆ ಇದೀಗ ಪೆಟ್ರೋಲ್ ದರ ಶಾಕ್ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಒಂದು ವಾರದಿಂದ ನಿರಂತರವಾಗಿ ಪೆಟ್ರೋಲ್ ದರ ಏರಿಕೆಯಾಗುತ್ತಿದೆ.

ಚಿಕ್ಕಮಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.18 ರೂಪಾಯಿಯಾಗಿದೆ. ಚಿತ್ರದುರ್ಗದಲ್ಲಿ 100.18 ರೂ, ಬಳ್ಳಾರಿಯಲ್ಲಿ 100.66 ರೂ. ಶಿವಮೊಗ್ಗದಲ್ಲಿ 100.16 ರೂ ಆಗಿದೆ. ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲೂ ಶತಕ ಬಾರಿಸಿದ ಪೆಟ್ರೋಲ್ ದರ, ಶಿವಮೊಗ್ಗ ಸೇರಿ ಹಲವೆಡೆ 100 ರೂ.ಗಡಿ ದಾಟಿದ ಬೆಲೆ

ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಹೀಗಿದೆ:

ದಾವಣಗೆರೆಯಲ್ಲಿ ಲೀಟರ್ ಪೆಟ್ರೋಲ್ 100.45 ರೂ.
ಕೋಲಾರ 99.10 ರೂ.
ಕೊಡಗು 99.81 ರೂ.
ಬೀದರ್ 99.61 ರೂ.
ಬಾಗಲಕೋಟೆ 99.19 ರೂ.
ಯಾದಗಿರಿ 99.07ರೂ.
ಹಾವೇರಿ ಜಿಲ್ಲೆಯಲ್ಲಿ 99.30 ರೂ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...