alex Certify BIG NEWS: ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿದೆ; ಬಿಜೆಪಿ ಸರ್ಕಾರದ ವಿರುದ್ಧ ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ; ಡಿ.ಕೆ.ಶಿ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ 40% ಭ್ರಷ್ಟಾಚಾರ ತಾಂಡವವಾಡುತ್ತಿದೆ; ಬಿಜೆಪಿ ಸರ್ಕಾರದ ವಿರುದ್ಧ ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ; ಡಿ.ಕೆ.ಶಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. 40% ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ದಿನೇ ದಿನೆ ಸಾಕ್ಷಿಗಳು ಹೊರಬರುತ್ತಿವೆ. ಮುಖ್ಯಮಂತ್ರಿಗಳು, ಸಚಿವರು ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇತ್ತೀಚೆಗೆ ಕೆ.ಆರ್. ಪುರದ ಪೊಲೀಸ್ ಅಧಿಕಾರಿ ನಂದೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಇದು ಸಹಜ ಸಾವಲ್ಲ, ಸರ್ಕಾರ ಮಾಡಿರುವ ಕೊಲೆ. ಸಚಿವರಾದ ಎಂಟಿಬಿ ನಾಗರಾಜ್ ಅವರು ನಂದೀಶ್ ಅವರ ಪಾರ್ಥೀವ ಶರೀರದ ದರ್ಶನಕ್ಕೆ ಹೋದ ಸಂದರ್ಭದಲ್ಲಿ 70-80 ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡು ಬಂದರೆ ಹೃದಯಾಘಾತ ಆಗದೇ ಇರುತ್ತದೆಯೇ ಎಂದು ಹೇಳಿದ್ದಾರೆ. ಈ ಸಂಭಾಷಣೆ ಬಹಿರಂಗವಾಗಿದೆ. ಅಂದರೆ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಲಂಚ ಸ್ವೀಕರಿಸಲಾಗುತ್ತದೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯ ಶಾಂತಿನಗರದ ಗುತ್ತಿಗೆದಾರ ಬಸವರಾಜ್ ಅಮರಗೋಳ್ ಎಂಬಾತ ಕೋವಿಡ್ ಸಮಯದಲ್ಲಿ ಪರಿಕರಗಳ ಸರಬರಾಜು ಮಾಡಿದ್ದು, ಆತನಿಗೆ ಸರ್ಕಾರದಿಂದ ಬಿಲ್ ಪಾವತಿ ಆಗಿಲ್ಲ. ಈ ಬಿಲ್ ಪಾವತಿಗೆ ಪಂಚಾಯತಿ ಅಧಿಕಾರಿಗಳು 30-40% ಲಂಚ ಕೇಳುತ್ತಿದ್ದಾರೆ ಎಂದು ಫೆ.22ರಂದೇ ದೂರು ದಾಖಲಿಸಿದ್ದಾರೆ. ಇಒ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದು, ನಾನು ಸಾಲ ಮಾಡಿ ಈ ಪರಿಕರಗಳ ಪೂರೈಕೆ ಮಾಡಿದ್ದೆ. ನನಗೆ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ ನನಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ರೀತಿ ತಾಂಡವವಾಡುತ್ತಿದೆ ಎಂದರೆ ಸರ್ಕಾರಿ ಹುದ್ದೆಗಳ ದರವನ್ನು ಹೊಟೇಲ್ ನಲ್ಲಿ ತಿಂಡಿಗಳ ಪಟ್ಟಿಯಂತೆ ಮಾಡಲಾಗಿದೆ. ಸರ್ಕಾರದ ಭ್ರಷ್ಟಾಚಾರವನ್ನು ಮಾಧ್ಯಮಗಳು ಬಯಲಿಗೆಳೆಯುತ್ತಿವೆ ಎಂದು ಮಾಧ್ಯಮಗಳ ಬಾಯಿ ಮುಚ್ಚಿಸಲು ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ನಲ್ಲಿ ಹಣ ನೀಡುತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾರಂಗ ಕೆಲಸ ಮಾಡಬೇಕು. ಈ ರೀತಿ ಹಣ ನೀಡಿದ ಉದಾಹರಣೆಯನ್ನೇ ನಾನು ನೋಡಿರಲಿಲ್ಲ. ಮಾಧ್ಯಮದವರನ್ನೂ ಭ್ರಷ್ಟಾಚಾರದ ಸುಳಿಗೆ ಸೆಳೆಯಲು ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಸುಪ್ರೀಂ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...