ಮೈಸೂರು: ರಾಜ್ಯದಲ್ಲಿ ಮತ್ತೊಂದು ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ವಿದೇಶದಿಂದ ಆಗಮಿಸಿರುವ ವಿದ್ಯಾರ್ಥಿನಿಯೋರ್ವರಲ್ಲಿ ಒಮಿಕ್ರಾನ್ ದೃಢಪಟ್ಟಿದೆ.
ತಾಂಜೇನಿಯಾದಿಂದ ಮೈಸೂರಿಗೆ ಆಗಮಿಸಿರುವ ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಸೋಂಕಿತ ವಿದ್ಯಾರ್ಥಿನಿಯನ್ನು ಐಸೋಲೇಷನ್ ಮಾಡಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಐಪಿಓಗಾಗಿ ಎಲ್ಐಸಿ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಇಲ್ಲಿದೆ ಟಿಪ್ಸ್
ಡಿಸೆಂಬರ್ 20ರಂದು ಮೈಸೂರಿಗೆ ಆಗಮಿಸಿದ್ದ ಸೋಂಕಿತ ವಿದ್ಯಾರ್ಥಿನಿಗೆ ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿತ್ತು. ಸ್ಯಾಂಪಲ್ ನ್ನು ಜೆನೋಮಿಕ್ ಸೀಕ್ವೆನ್ಸಿಗೆ ಕಳುಹಿಸಲಾಗಿದ್ದು, ವರದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.